ಯಾದಗಿರಿ: ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ಗೆ 200 ರೂ.ಸಬ್ಸಿಡಿ ಘೋಷಣೆ ಮಾಡಿದ್ದು ದೊಡ್ಡ ಕೊಡುಗೆಯಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು.
ವಿಧಾನಸಭೆ ಚುನಾವಣೆ ಬಳಿಕ ಬಿಜೆಪಿಯವರಿಗೆ ಜನರ ಬಗ್ಗೆ ಕಾಳಜಿ ಹೆಚ್ಚಾದಂತೆ ಕಾಣುತ್ತಿದೆ. ಜನ ಪ್ರಧಾನಿ ಮೋದಿ ಮುಖ ನೋಡಿ ನಮಗೆ ಮತ ಹಾಕಲ್ಲ ಎಂಬ ಸತ್ಯ ಅರಿವಾದಂತೆ ಕಾಣುತ್ತಿದೆ. ಜನರ ಮನಸ್ಸಿಗೆ ಹತ್ತಿರವಾಗುವಂಥ ಕಾರ್ಯಕ್ರಮ ರೂಪಿಸಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಟ್ಯಾಂಗ್ ನೀಡಿದರು.
ಯುಪಿಎ ಸರ್ಕಾರವಿದ್ದಾಗ ಅಡಿಗೆ ಅನಿಲದ ಬೆಲೆ 450 ರೂ.ಇತ್ತು. ಈಗ 1150ರೂ.ಏರಿಕೆಯಾಗಿದೆ. ಇದರಲ್ಲಿ 200 ರೂ.ಸಬ್ಸಿಡಿ ನೀಡಿದ್ದಾರೆ. ಕರಾನಾ ಬಳಿಕ ದೇಶದಲ್ಲಿ ಬಹಳಷ್ಟು ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಕೇಂದ್ರ ಸರ್ಕಾರಅಂಥವರ ನೆರವಿಗೆ ಧಾವಿಸಬೇಕಾದ ಅನಿವಾರ್ಯತೆ ಇದೆ. ಖಾಲಿ ಭಾಷಣದಿಂದ ಜನರಿಗೆ ಹತ್ತಿರವಾಗಲು ಸಾಧ್ಯವಿಲ್ಲ ಎಂದರು.
ಕಾಂಗ್ರೆಸ್ನ ಯಾವ ಶಾಸಕರೂ ಬಿಜೆಪಿಯವರ ಬಾಗಿಲು ಬಡಿದಿಲ್ಲ. ನಮಗೆ ಆಪರೇಷನ್ ಕಮಲ ಮಾಡುವ ಅವಶ್ಯಕತೆ ಇಲ್ಲ. ಅಲ್ಲದೆ ಬಿಜೆಪಿಯಿಂದ ನಮ್ಮ ಪಕ್ಷಕ್ಕೆ ಯಾರು ಬರುತ್ತಾರೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ಯಾರೂ ಬಂದರೂ ನಮಗೆ ಸಮಸ್ಯೆ ಇಲ್ಲ. ಕರೊನಾ ನಿರ್ವಹಣೆಗಾಗಿ ಕೆಕೆಆರ್ಡಿಬಿಯಿಂದ 100 ಕೋಟಿ ಅನುದಾನ ಖಚರ್ು ಮಾಡಿದ ಬಗ್ಗೆ ಮಂಗಳವಾರ ನಡೆದ ಸಭೆಯಲ್ಲಿ ಬೆಳಕಿಗೆ ಬಂದಿದೆ. ಈ ಬಗ್ಗೆ ಬರುವ ದಿನಗಳಲ್ಲಿ ತನಿಖೆ ನಡೆಸಲಾಗುವುದು ಎಂದು ಹೇಳಿದರು.