ಧಾರವಾಡ: ಜಿಲ್ಲೆಯಲ್ಲಿ ಭಾನುವಾರ 126 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 2043ಕ್ಕೆ ಜಿಗಿದಿದೆ. ಮತ್ತೆ ನಾಲ್ವರು ಮೃತಪಟ್ಟಿದ್ದು, ಕರೊನಾಕ್ಕೆ ಬಲಿಯಾದವರ ಸಂಖ್ಯೆ 62ಕ್ಕೆ ಏರಿದೆ.
ಭಾನುವಾರ ದೃಢಪಟ್ಟ 126 ಪ್ರಕರಣಗಳ ಮಾಹಿತಿ ತಾಲೂಕುವಾರು ಇಂತಿದೆ.
ಹುಬ್ಬಳ್ಳಿ ತಾಲೂಕು: ಗೌಸಿಯಾನಗರದ 29 ವರ್ಷದ ಯುವಕ, ಆದರ್ಶ ನಗರದ 22ರ ಯುವಕ, ತಾಜನಗರದ 21ರ ಯುವಕ, ಮಧುರಾ ಪಾರ್ಕ್ನ 43 ವರ್ಷದ ಮಹಿಳೆ, ಸುತಗಟ್ಟಿ ಶಂಕರಜ್ಯೋತಿ ನಗರದ 29ರ ಯುವಕ, ನೇಕಾರ ನಗರದ 49ರ ಪುರುಷ, 65 ವರ್ಷದ ವೃದ್ಧೆ, ಕಸಬಾಪೇಟ ಪೊಲೀಸ್ ಠಾಣೆಯ 24 ವರ್ಷದ ಯುವಕ, ರೇಣುಕಾ ನಗರದ 46ರ ಪುರುಷ, ಕಾಳಿದಾಸ ನಗರದ 37 ವರ್ಷದ ಮಹಿಳೆ, ಕೇಶ್ವಾಪುರದ 51, 43, 55 ವರ್ಷದ ಪುರುಷರು, 20ರ ಯುವಕ, 38 ವರ್ಷದ ಮಹಿಳೆ, ಗಾರ್ಡನ್ಪೇಟೆಯ 72ರ ವೃದ್ಧ, ವಿದ್ಯಾನಗರದ 26ರ ಯುವಕ, ಭವಾನಿ ನಗರದ 20ರ ಯುವತಿ, 49 ವರ್ಷದ ಪುರುಷ, ಹೊಸೂರಿನ 39 ವರ್ಷದ ಪುರುಷ, ಕೇಶ್ವಾಪುರದ 60 ವರ್ಷದ ವೃದ್ಧೆ, ವೆಂಕಟೇಶ ಕಾಲನಿಯ 59ರ ಮಹಿಳೆ, ರೈಲ್ವೆ ಪೊಲೀಸ್ ಸ್ಟೇಷನ್ನ 30 ವರ್ಷದ ಯುವಕ, ಆನಂದ ನಗರದ 40 ವರ್ಷದ ಮಹಿಳೆ, ಶಿವಸೋಮೇಶ್ವರ ನಗರದ 50ರ ಪುರುಷ, ವಿದ್ಯಾನಗರದ 55 ವರ್ಷದ ಪುರುಷ, ಬೊಮ್ಮಾಪುರ ಕುಂಬಾರ ಓಣಿಯ 52 ವರ್ಷದ ಮಹಿಳೆ, ಕುಲಕರ್ಣಿ ಹಕ್ಕಲದ 32ರ ಯುವಕ, ತೊರವಿ ಹಕ್ಕಲದ 55ರ ಮಹಿಳೆ, ಹೊಸೂರಿನ 8 ವರ್ಷದ ಬಾಲಕ, ತಬೀಬ್ಲ್ಯಾಂಡ್ನ 70ರ ವೃದ್ಧ, ಮಂಟೂರ ರಸ್ತೆಯ 56ರ ಮಹಿಳೆ, ಕಿಮ್್ಸ ಕ್ಯಾಂಪಸ್ನ 34 ವರ್ಷದ ಯುವತಿ, 32 ವರ್ಷದ ಯುವಕ, 18 ವರ್ಷದ ಯುವತಿ, ಅಲ್ತಾಫ್ ಪ್ಲಾಟ್ನ 60 ವರ್ಷದ ವೃದ್ಧ, ರವಿನಗರದ 51 ವರ್ಷದ ಮಹಿಳೆ, 60ರ ವೃದ್ಧ, ಮಂಗಳ ಓಣಿಯ 84ರ ವೃದ್ಧೆ, 22, 24 ವರ್ಷದ ಯುವತಿಯರು, 51 ವರ್ಷದ ಮಹಿಳೆ, ಯುಟಿಕೆ ಹಿಲ್ನ 57 ವರ್ಷದ ಮಹಿಳೆ, ಶ್ರೀನಿವಾಸ ನಗರದ 33ರ ಯುವತಿ, ಆನಂದ ನಗರದ 40ರ ಪುರುಷ, ಶೆರೆವಾಡದ 50 ವರ್ಷದ ಪುರುಷ, ಗದಗ ರಸ್ತೆಯ 40 ವರ್ಷದ ಮಹಿಳೆ, 38, 41 ವರ್ಷದ ಪುರುಷರು, ಶೀಲವಂತರ ಓಣಿಯ 43ರ ಪುರುಷ, ವಿದ್ಯಾನಗರದ 36, 34 ವರ್ಷದ ಯುವಕರು, ಕಾರವಾರ ರಸ್ತೆಯ 64 ವರ್ಷದ ಪುರುಷ, ದೇವರಗುಡಿಹಾಳದ 61 ವರ್ಷದ ಮಹಿಳೆ, ಬ್ಯಾಹಟ್ಟಿಯ 20 ವರ್ಷದ ಯುವಕ, ಸದರಸೋಫಾದ 83ರ ವೃದ್ಧೆ, ಬಿಡ್ನಾಳದ 38 ವರ್ಷದ ಪುರುಷ, ಭೈರಿದೇವರಕೊಪ್ಪದ 21 ವರ್ಷದ ಯುವತಿ, ಸಿದ್ಧೇಶ್ವರ ನಗರದ 69ರ ವೃದ್ಧ, ಸೋಲಾರಗೊಪ್ಪದ 60 ವರ್ಷದ ಪುರುಷ, ಅಧ್ಯಾಪಕ ನಗರದ 43ರ ಪುರುಷ, ಲಕ್ಷ್ಮೀ ಕಾಲನಿಯ 39ರ ಪುರುಷ, ಉಪನಗರ ಠಾಣೆಯ 52ರ ಪುರುಷ, ನಾರಾಯಣಸೋಫಾದ 51ರ ಪುರುಷ, ಗಣೇಶ ಕಾಲನಿಯ 47ರ ಪುರುಷ, ಗಂಗಾಧರ ನಗರದ 75ರ ವೃದ್ಧ, ಅರಳಿಕಟ್ಟಿ ಓಣಿಯ 40 ವರ್ಷದ ಪುರುಷ, ಸಹದೇವ ನಗರದ 54ರ ಪುರುಷ, ಗೋಪನಕೊಪ್ಪದ 31ರ ಯುವಕ, ಅಮ್ಟೆ ಚಾಳದ 69ರ ವೃದ್ಧೆ, 74ರ ವೃದ್ಧ, ಕಾಪೋರೇಶನ್ ಬ್ಯಾಂಕ್ನ 42 ವರ್ಷದ ಪುರುಷ, ಕೆ.ಬಿ. ನಗರದ 48ರ ಮಹಿಳೆ, ರೈಲ್ವೆ ಪೊಲೀಸ್ ಠಾಣೆಯ 59 ವರ್ಷದ ಪುರುಷ, ಕಿಮ್್ಸ ಕ್ಯಾಂಪಸ್ನ 4 ವರ್ಷದ ಬಾಲಕ, ಸಾಗರ ಕಾಲನಿಯ 44 ವರ್ಷದ ಪುರುಷ, ಬಿಡ್ನಾಳದ 44 ವರ್ಷದ ಪುರುಷ, ಬಸವೇಶ್ವರ ನಗರದ 22ರ ಯುವಕ, ಅಯೋಧ್ಯಾನಗರದ 39ರ ಪುರುಷ, ಕಾರವಾರ ರಸ್ತೆಯ 55 ವರ್ಷದ ಮಹಿಳೆ, 17ರ ಬಾಲಕಿ, ಚನ್ನಪೇಟೆಯ 33ರ ಯುವತಿ, ಕೌಲಪೇಟೆಯ 51ರ ಪುರುಷ, ಗಣೇಶಪೇಟೆಯ 55 ವರ್ಷದ ಮಹಿಳೆ, ಶಿರಗುಪ್ಪಿಯ 21 ವರ್ಷದ ಯುವತಿ, ಮಂಗಳ ಓಣಿಯ 11 ವರ್ಷದ ಬಾಲಕಿ, 18 ವರ್ಷದ ಯುವತಿ, 58 ವರ್ಷದ ಪುರುಷ, ಗೋಕುಲ ರಸ್ತೆಯ 38 ವರ್ಷದ ಪುರುಷ, ಹುಬ್ಬಳ್ಳಿಯ 24 ವರ್ಷದ ಯುವತಿ, 69ರ ವೃದ್ಧ, 46 ವರ್ಷದ ಪುರುಷ, 23ರ ಯುವಕ, 77 ವರ್ಷದ ವೃದ್ಧ, 40 ವರ್ಷದ ಪುರುಷನಿಗೆ ಸೋಂಕು ತಗುಲಿದೆ.
ಧಾರವಾಡ ತಾಲೂಕು:
ಶಿವಗಿರಿ ಮಂಜುನಾಥ ನಗರದ 75 ವರ್ಷದ ವೃದ್ಧ, ಗಾಂಧಿನಗರದ 86ರ ವೃದ್ಧ, 59ರ ಪುರುಷ, ಕೆಲಗೇರಿ ರಸ್ತೆಯ 85ರ ವೃದ್ಧೆ, ಹೊಸಯಲ್ಲಾಪುರ ಹಿರೇಮಠ ಓಣಿಯ 29ರ ಯುವಕ, ಹೆಬ್ಬಳ್ಳಿ ಅಗಸಿಯ 23ರ ಯುವಕ, ಲೈನ್ಬಜಾರ್ ದುರ್ಗಾ ದೇವಸ್ಥಾನ ಬಳಿಯ 45 ವರ್ಷದ ಪುರುಷ, ರಾಮನಗರದ 40ರ ಮಹಿಳೆ, ಲಕಮನಹಳ್ಳಿಯ 34ರ ಯುವಕ, ನೆಹರು ನಗರದ 52ರ ಪುರುಷ, ಮಾಳಾಪುರದ 42ರ ಪುರುಷ, ಮಕಾನದಾರ ಗಲ್ಲಿಯ 24ರ ಯುವತಿ, ಯಾಲಕ್ಕಿ ಶೆಟ್ಟರ್ ಕಾಲನಿಯ 32 ವರ್ಷದ ಯುವತಿ, ಮರಾಠಾ ಕಾಲನಿಯ 30ರ ಯುವತಿ, ಜಿಲ್ಲಾಸ್ಪತ್ರೆ ಸ್ಟಾಫ್ ಕ್ವಾರ್ಟರ್ಸ್ನ 30 ವರ್ಷದ ಯುವತಿ, 36 ವರ್ಷದ ಮಹಿಳೆ, ರಾಜನಗರ 1ನೇ ಕ್ರಾಸ್ನ 35ರ ಪುರುಷ, ಸೈದಾಪುರ ಹೊಸ ಓಣಿಯ 29ರ ಯುವಕ, ಧಾರವಾಡದ 24 ವರ್ಷದ ಯುವಕ, ಹೆಬ್ಬಳ್ಳಿ ಗ್ರಾಮದ 30 ವರ್ಷದ ಯುವತಿ, ಕಲ್ಯಾಣನಗರದ ರಂಗಮಂದಿರ ಬಳಿಯ 56 ವರ್ಷದ ಮಹಿಳೆಗೆ ಸೋಂಕು ತಗುಲಿದೆ.
ನವಲಗುಂದದ 22 ವರ್ಷದ ಯುವಕ, 9 ವರ್ಷದ ಬಾಲಕಿ, ಕುಂದಗೋಳ ಪಟ್ಟಣದ 1 ವರ್ಷದ ಹೆಣ್ಣುಮಗು, ಸಂಶಿ ಗ್ರಾಮದ 62 ವರ್ಷದ ವೃದ್ಧೆ, ಕಲಘಟಗಿ ತಾಲೂಕು ಬೈರವಳ್ಳಿ ಗ್ರಾಮದ 31 ವರ್ಷದ ಯುವತಿ, ಬೆಳಗಾವಿ ಜಿಲ್ಲೆ ಸವದತ್ತಿಯ 48 ವರ್ಷದ ಮಹಿಳೆ, ಕಿತ್ತೂರಿನ 24 ವರ್ಷದ ಯುವತಿ, ದಾವಣಗೆರೆ ಜಿಲ್ಲೆ ಹರಪನಹಳ್ಳಿಯ 65 ವರ್ಷದ ವೃದ್ಧೆ, ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕಿನ ಕಬನೂರ ಗ್ರಾಮದ 52 ವರ್ಷದ ಪುರುಷ, ಉತ್ತರ ಕನ್ನಡ ಜಿಲ್ಲೆ ಮೂಲದವನಾದ ಕುಂದಾಪುರ ಕೆಎಸ್ಆರ್ಟಿಸಿ ಡಿಪೋದ 32 ವರ್ಷದ ಪುರುಷ, ಗದಗ ಜಿಲ್ಲೆ ಹುಲಕೋಟಿಯ 32 ವರ್ಷದ ಯುವಕನಿಗೆ ಕರೊನಾ ವೈರಸ್ ತಗುಲಿರುವುದು ದೃಢಪಟ್ಟಿದೆ.
ಹೋಂ ಐಸೊಲೇಷನ್ ಮಾರ್ಗಸೂಚಿ
ಧಾರವಾಡ: ಕರೊನಾ ಲಕ್ಷಣ ರಹಿತ ಸೋಂಕಿತರು ಅಥವಾ ಸೌಮ್ಯ ಲಕ್ಷಣ ಹೊಂದಿರುವವರು ಮಾತ್ರ ಮನೆಯಲ್ಲಿ ಪ್ರತ್ಯೇಕ (ಹೋಂ ಐಸೋಲೇಷನ್)ವಾಗಿರಬಹುದು. ಇಂತಹವರು ಅನುಸರಿಸಬೇಕಾದ ನಿಯಮಗಳ ಬಗ್ಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸಲಹೆ ನೀಡಿದೆ.
ಮನೆಯಲ್ಲಿ ಬೆಳಕು, ಗಾಳಿ ಬರುವ ಕೊಠಡಿಯಲ್ಲಿ ಪ್ರತ್ಯೇಕವಾಗಿರುವ ಶೌಚಗೃಹ ಹೊಂದಿರಬೇಕು. ಮನೆಯಲ್ಲಿ ಡಿಜಿಟಲ್ ಥರ್ವ ಮೀಟರ್, ಪಲ್ಸ್ ಆಕ್ಸಿಮೀಟರ್, ವೈಯಕ್ತಿಕ ರಕ್ಷಣಾ ಸಲಕರಣೆ ಹೊಂದಿರಬೇಕು. ಪಾಸಿಟಿವ್ ಕಂಡು ಬಂದ ವ್ಯಕ್ತಿಯ ಆರೈಕೆಗೆ ಮನೆಯ ಒಬ್ಬ ಸದಸ್ಯರನ್ನು ನೇಮಿಸಬೇಕು. ಆ ವ್ಯಕ್ತಿ ಕಡ್ಡಾಯವಾಗಿ ಕ್ವಾರಂಟೈನ್ ವಾಚ್ ಆಪ್ ಹೊಂದಿರಬೇಕಲ್ಲದೆ, ವೈದ್ಯಕೀಯ ಮಾಸ್ಕ್ (ಎನ್ 95) ಧರಿಸಿರಬೇಕು.
ಪ್ರತ್ಯೇಕವಾಗಿರುವ ವ್ಯಕ್ತಿ ಯಾವುದೇ ಕಾರಣಕ್ಕೂ ಕೊಠಡಿಯಿಂದ ಹೊರಗಡೆ ಹೋಗುವಂತಿಲ್ಲ. ಹೆಚ್ಚು ದ್ರವ ಆಹಾರ, ನೀರು ಸೇವಿಸಬೇಕು. ವೈಯಕ್ತಿಕವಾಗಿ ಬಳಸುವ ಪಾತ್ರೆಗಳು, ಬಟ್ಟೆ, ಟವೆಲ್ ಇತ್ಯಾದಿಗಳನ್ನು ಕುಟುಂಬದ ಇತರ ಸದ್ಯಸರೊಂದಿಗೆ ಹಂಚಿಕೊಳ್ಳದೆ ದೂರ ಇಡಬೇಕು.
ವೈದ್ಯರ ಸಲಹೆಗಳ ಹಾಗೂ ಔಷಧೋಪಚಾರವನ್ನು ಕಡ್ಡಾಯವಾಗಿ ಪಾಲಿಸಿ, ವೈದ್ಯರು ತಿಳಿಸಿದ ಔಷಧಿಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳಬೇಕು. ಪಲ್ಸ್ ಆಕ್ಸಿ ಮೀಟರ್, ಡಿಜಿಟಲ್ ಥರ್ವ ಮೀಟರ್ನಿಂದ ಆಗಾಗ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕಲ್ಲದೆ, ಜ್ವರ, ಗಂಟಲ ಕೆರೆತ, ನೆಗಡಿ ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂರ್ಪಸಿ ಸಲಹೆ ಸೂಚನೆ ಪಡೆಯಬೇಕು.
ಧೂಮಪಾನ, ತಂಬಾಕು ಸೇವನೆ ಕಡ್ಡಾಯವಾಗಿ ನಿರ್ಬಂಧಿಸಬೇಕು. ಅಗತ್ಯವಿದ್ದಲ್ಲಿ ಆಪ್ತ ಸಮಾಲೋಚನೆ ಮಾಡಿಸಿಕೊಳ್ಳುವುದು, ಪ್ರತ್ಯೇಕವಾಗಿರುವ ಪ್ರತಿಯೊಬ್ಬ ವ್ಯಕ್ತಿ ಕಡ್ಡಾಯವಾಗಿ ಆರೋಗ್ಯ ಸೇತು ಆಪ್ ಡೌನ್ಲೋಡ್ ಮಾಡಿಕೊಂಡು ಲೊಕೇಷನ್, ಇಂಟರ್ನೆಟ್, ಬ್ಲೂ ಟೂತ್ ಆನ್ ಮಾಡಿರಬೇಕು. ಈ ಎಲ್ಲ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.