ಸೊರಬ ತಾಲೂಕಿನ ಮೂಡುಗೋಡು ಗ್ರಾಮದಲ್ಲಿ ಕಳ್ಳತನವಾದ ಅಡಿಕೆ ಗೋದಾಮು.  
ಜಿಲ್ಲೆ

200 ಕ್ವಿಂಟಾಲ್ ಅಡಕೆ ಕಳವು

Shivamogga - Desk - Vinayakumar D B

ಸೊರಬ: ತಾಲೂಕಿನ ಮೂಡುಗೋಡು ಗ್ರಾಮದ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು 7 ಲಕ್ಷ ರೂ. ಮೌಲ್ಯದ ಅಡಕೆ ಮತ್ತು ಗೇರುಬೀಜವನ್ನು ಗುರುವಾರ ತಡರಾತ್ರಿ ಕಳವು ಮಾಡಲಾಗಿದೆ. ಜಯಕುಮಾರ್ ಎಂಬುವರು ಮನೆ ಪಕ್ಕದಲ್ಲಿ ಅಡಕೆ ಗೋದಾಮು ನಿರ್ಮಿಸಿಕೊಂಡಿದ್ದು, 200 ಕ್ವಿಂಟಾಲ್ ಸಿಪ್ಪೆ ಅಡಿಕೆ, 10 ಕ್ವಿಂಟಾಲ್ ಕೆಂಪು ಅಡಿಕೆ ಹಾಗೂ 17 ಕ್ವಿಂಟಾಲ್ ಗೇರುಬೀಜವನ್ನು ಸಂಗ್ರಹಿಸಿದ್ದರು. ಶುಕ್ರವಾರ ಬೆಳಗ್ಗೆ ಗೋದಾಮಿಗೆ ತೆರಳಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಬೆಳರಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದರು.