ನಿಂಬೆಗೊಂದಿ ಸಮೀಪ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ಶಿವಮೊಗ್ಗ ಎಸಿ ಸತ್ಯನಾರಾಯಣ, ರಾಜು, ರಮೇಶ್ ಭೇಟಿ ನೀಡಿದ್ದರು. 
ಜಿಲ್ಲೆ

20 ಲಾರಿ ಲೋಡ್ ಮರಳು ವಶಕ್ಕೆ

ಹೊಳೆಹೊನ್ನೂರು: ನಿಂಬೆಗೊಂದಿ ಸಮೀಪ ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಅಡ್ಡೆ ಮೇಲೆ ಗುರುವಾರ ಶಿವಮೊಗ್ಗ ಉಪವಿಭಾಗಾಧಿಕಾರಿ ಸತ್ಯನಾರಾಯಣ ನೇತೃತ್ವದ ತಂಡ ದಾಳಿ ನಡೆಸಿದೆ. ಅಕ್ರಮವಾಗಿ ದಾಸ್ತಾನು ಮಾಡಿದ 20 ಲಾರಿ ಲೋಡ್ ಮರಳು, ಒಂದು ಜೆಸಿಬಿ ಹಾಗೂ ಒಂದು ಕರಾವಳಿ ಮೋಟಾರ್ ಬೋಟ್ ಜಪ್ತಿ ಮಾಡಲಾಗಿದೆ. ಹಾಗೆಯೇ ಮಂಗೋಟೆಯಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿ ತಡೆದು 20 ಸಾವಿರ ರೂ. ದಂಡ ವಿಧಿಸಲಾಗಿದೆ. ರಾಜಸ್ವ ನಿರೀಕ್ಷಕ ರಾಜು, ಪಿಎಸ್‌ಐ ರಮೇಶ್ ಇತರರಿದ್ದರು.