ಜಿಲ್ಲೆ

20 ಬೃಹತ್ ಉದ್ಯೋಗ ಮೇಳ

ಡಿ.ಪಿ.ನಾಗರಾಜ ಶ್ರೇಷ್ಠಿ


ಚಿತ್ರದುರ್ಗ:ರಾಷ್ಟ್ರೀಯ ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ ಸಂಸ್ಥೆ,ನ್ಯಾಷನಲ್ ಕೆರಿಯರ್ ಸರ್ವಿಸ್,ರಾಜ್ಯದ ಕೌಶಲಾಭಿವೃದ್ಧಿ,ಉದ್ಯ ಮ ಶೀಲತೆ ಮತ್ತು ಜೀವನೋಪಾಯ,ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಗಳು ಹಾಗೂ ಕರ್ನಾಟಕ ಕೌಶಲಾಭಿವೃದ್ಧಿ ನಿಗ ಮ ಸಹಕಾರದೊಂದಿಗೆ ಅ.20ರಂದು ಬೆಂಗಳೂರಲ್ಲಿ ಬೃಹತ್ ಉದ್ಯೋಗ ಮೇಳ ಏರ್ಪಡಿಸಲಾಗಿದೆ. ರಾಜಾಜಿನಗರ,2ನೇ ಬ್ಲಾಕ್,28ನೇ ಕ್ರಾಸ್‌ರಸ್ತೆಯಲ್ಲಿರುವ ಕೆಎಲ್‌ಇ ಸಂಸ್ಥೆ ಎಸ್.ನಿಜಲಿಂಗಪ್ಪ ಮಹಾವಿದ್ಯಾಲಯದಲ್ಲಿ ಆಯೋಜಿಸಿರುವ ಈ ಮೇಳದಲ್ಲಿ 100ಕ್ಕೂ ಹೆಚ್ಚಿನ ಉ ದ್ಯೋಗ ಸಂಸ್ಥೆಗಳು ಭಾಗವಹಿ ಸಲಿವೆ.ಆಸಕ್ತರು https://jobfair.calicut.nielit.inರಲ್ಲಿ ಉಚಿತವಾಗಿ ನೋಂದಣಿ ಮಾಡಿ ಸಿ,ಮೇಳದಲ್ಲಿ ಭಾಗವಹಿಸಬಹುದೆಂದು ಪ್ರಕಟಣೆ ತಿಳಿಸಿದೆ.