ಜಿಲ್ಲೆ

20 ವರ್ಷದಿಂದ ಚರಂಡಿ ಸಮಸ್ಯೆ!

ನಾಗರಾಜ ಜೋರಾಪೂರ ಚನ್ನಮ್ಮನ ಕಿತ್ತೂರು

ಪಟ್ಟಣದ ಸೋಮವಾರಪೇಟೆಯ ಚರಂಡಿ ನೀರು ಹರಿದು ಕಿತ್ತೂರು ಮತ್ತು ನಿಚ್ಚಣಕಿ ಮಧ್ಯದ ಸಮಗಾರ ಓಣಿ ಹಾಗೂ ಬಸವೇಶ್ವರ ನಗರದ ಮಧ್ಯದಲ್ಲಿ ಸಂಗ್ರಹವಾಗುತ್ತಿದೆ. ಇದು ಇಂದು ನಿನ್ನೆಯದಲ್ಲ, ಕಳೆದ 20 ವರ್ಷಗಳಿಂದ ಚರಂಡಿ ನೀರು ಶೇಖರಣೆಯಾಗಿ ದುರ್ವಾಸನೆ ಬೀರುತ್ತಿದ್ದು, ನಿವಾಸಿಗಳಿಗೆ ರೋಗಗಳ ಭೀತಿ ಎದುರಾಗಿದೆ.

ಚರಂಡಿ ನಿರ್ಮಾಣಕ್ಕಾಗಿ ಹಿಂದಿನ ಸರ್ಕಾರದ ಅವಧಿಯಲ್ಲಿ ರಾಜ್ಯ ರಸ್ತೆ ಯೋಜನೆಯಡಿ 60 ಲ ರೂ ಮತ್ತು ನಗರೋತ್ಥಾನ ಯೋಜನೆಯಡಿ 16 ಲ ರೂ. ಸೇರಿ ಒಟ್ಟು 76 ಲ ರೂ. ಅನುದಾನ ಮಂಜೂರಾದರೂ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ. ಇದು ನಿವಾಸಿಗಳು ಪರದಾಡುವಂತೆ ಮಾಡಿದೆ.

ಪಟ್ಟಣದ ಸೋಮವಾರಪೇಟೆ ಚರಂಡಿ ನೀರು ಹರಿದು ಹೋಗಲು ಸಮರ್ಪಕ ವ್ಯವಸ್ಥೆ ಇಲ್ಲದ ಪರಿಣಾಮ ನಿವಾಸಿಗಳ ಮನೆ, ಮೋರಿಗಳಿಗೆ ಕೊಳಚೆ ನೀರು ನುಗ್ಗುತ್ತಿದೆ. ನಿತ್ಯ ಬೆಳಗಾದರೆ ಗಬ್ಬು ವಾಸನೆ, ಸಂಜೆಯಾಗುತ್ತಿದ್ದಂತೆ ಸೊಳ್ಳೆಗಳ ಕಾಟ ವೀಪರಿತವಾಗುತ್ತದೆ. ಹೀಗಾಗಿ, ಇಲ್ಲಿನ ನಿವಾಸಿಗಳ ಗೋಳು ಕೇಳೋರ್ಯಾರು ಎಂಬ ಸ್ಥಿತಿ ನಿರ್ಮಾಣವಾಗಿದೆ.

ಮಳೆಗಾಲದಲ್ಲಿ ನಿಚ್ಚಣಕಿ, ಶಿವನೂರು, ಮರಿಗೇರಿ ಸೇರಿ ವಿವಿಧ ಗ್ರಾಮಗಳಿಗೆ ತೆರಳುವ ರಸ್ತೆಯಲ್ಲಿ ಚರಂಡಿ ನೀರು ಸಂಗ್ರವಾಗಿ ಹೊಂಡವಾಗಿ ಮಾರ್ಪಡುತ್ತಿದೆ. ಸಾರ್ವಜನಿಕರು, ವಾಹನ ಚಾಲಕರು ಹಾಗೂ ಶಾಲಾ ಮಕ್ಕಳು ಓಡಾಡಲು ಪರದಾಡುವಂತಾಗುತ್ತದೆ.

ಅರ್ಧಕ್ಕೆ ನಿಂತ ಕಾಮಗಾರಿ: ಕಳೆದ ಮೂರು ವರ್ಷದ ಹಿಂದೆ ಚರಂಡಿ ನಿರ್ಮಾಣಕ್ಕಾಗಿ ಒಟ್ಟು 76 ಲ ರೂ. ಅನುದಾನ ಮಂಜೂರಾಗಿದೆ. ಚರಂಡಿ ನಿರ್ಮಾಣಕ್ಕಾಗಿ ರಸ್ತೆ ಉದ್ದಕ್ಕೂ ತೆಗೆಯಲಾದ 8&10 ಅಡಿ ಆಳದ ತಗ್ಗುಗಳಲ್ಲಿ ತ್ಯಾಜ್ಯಯುಕ್ತ ಕೊಳಚೆ ನೀರು ತುಂಬಿಕೊಂಡಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಕಾಮಗಾರಿ ಪ್ರಗತಿಯಲ್ಲಿದೆ ಎಂಬ ನಾಮಲಕವನ್ನೂ ಅಳವಡಿಸಿಲ್ಲ.

ಇನ್ನಾದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಮಸ್ಯೆಯತ್ತ ಗಮನ ಹರಿಸಿ ಸ್ಥಗಿತಗೊಂಡ ಚರಂಡಿ ಕಾಮಗಾರಿ ಶ್ರೀ ಪೂರ್ಣಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಚರಂಡಿ ಕಾಮಗಾರಿಗಾಗಿ ರಸ್ತೆ ಉದ್ದಕ್ಕೂ ತೆಗೆದಿರುವ ತಗ್ಗುಗಳಲ್ಲಿ ಕೊಳಚೆ ನೀರು ತುಂಬಿ ಮೋರಿ, ಪೈಪ್​ಲೈನ್​ ಮೂಲಕ ಮನೆಗಳಿಗೆ ನುಗ್ಗುತ್ತಿದೆ. ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

> ಸುರೇಶ ಪತ್ತಾರ, ಸ್ಥಳಿಯ ನಿವಾಸಿ

ಚರಂಡಿ ನೀರು ಮುಂದೆ ಸಾಗಲು ಖಾಸಗಿ ಜಾಗ ಇದ್ದಿದ್ದರಿಂದ ಬಹಳ ವರ್ಷಗಳಿಂದ ಸಮಸ್ಯೆ ಇತ್ತು. ಮಾಲೀಕರ ಮನವೊಲಿಸಿದ್ದೇವೆ. ಚರಂಡಿ ನೀರು ಸಾಗಿಸಲು ಒಪ್ಪಿಗೆ ನೀಡಿದ್ದು, ಶ್ರೀದಲ್ಲೇ ಕಾಮಗಾರಿ ಪೂರ್ಣಗೊಳಿಸಲಾಗುವುದು.

> ಜೈಸಿದ್ದರಾಮ ಮಾರಿಹಾಳ, ಪಪಂ ಅಧ್ಯ