ಜಿಲ್ಲೆ

ಕೇರಳಕ್ಕೆ ಅರಕಲಗೂಡಿನಿಂದ 20 ಲೋಡ್ ಹೂ

ಅರಕಲಗೂಡು: ಕೇಳದಲ್ಲಿ ಭಾನುವಾರ ನಡೆಯುವ ಓಣಂ ಹಬ್ಬಕ್ಕೆ ತಾಲೂಕಿನ ವಿವಿಧ ಭಾಗಗಳಿಂದ ಸುಮಾರು 20 ಲೋಡ್ ಹೂವನ್ನು ಶುಕ್ರವಾರ ರಾತ್ರಿ ಹೂವಿನ ವ್ಯಾಪಾರಸ್ಥರು ಮಾರಾಟಕ್ಕಾಗಿ ಕೊಂಡೊಯ್ದರು.


ತಾಲೂಕಿನ ಕಸಬಾ, ದೊಡ್ಡಮಗ್ಗೆ, ರಾಮನಾಥಪುರ, ಕೊಣನೂರು ಭಾಗದ ಹಲವು ಸಣ್ಣ ರೈತರು ಹೂವಿನ ಬೆಳೆ ಬೆಳೆಯುತ್ತಿದ್ದು ರಾಜ್ಯದ ವಿವಿಧೆಡೆಯಲ್ಲದೆ ಹೊರರಾಜ್ಯಗಳಿಗೂ ಕೊಂಡು ಹೋಗಿ ಮಾರಾಟ ಮಾಡುವುದು ಕಳೆದ ಹಲವು ದಶಕಗಳಿಂದ ನಡೆದು ಬಂದಿದೆ. ಕೇರಳದ ಓಣಂ ಹಬ್ಬದಲ್ಲಿ ಹೂವಿಗೆ ಹೆಚ್ಚಿನ ಬೇಡಿಕೆ ಇರುವ ಕಾರಣ ವ್ಯಾಪಾರಸ್ಥರು ವಿವಿಧ ಬಗೆಯ ಹೂವುಗಳನ್ನು ಕೊಂಡೊಯ್ದು ಮಾರಾಟ ಮಾಡುತ್ತಾರೆ.


ವಯನಾಡು ಭೂ ಕುಸಿತದಿಂದಾಗಿ ಈ ಬಾರಿ ಓಣಂ ಹಬ್ಬಕ್ಕಾಗಿ ಹೂವಿನ ಮಾರಾಟ ದರ ಕೊಂಚ ಕುಸಿತ ಕಂಡಿದೆ ಎನ್ನುತ್ತಾರೆ ಹೂ ವ್ಯಾಪಾರಿ ಸಂತೋಷ್.