ಎನ್.ಆರ್.ಪುರದ ಕೃಷಿ ಇಲಾಖೆ ಆವರಣದಲ್ಲಿ ರೈತ ಸಂಪರ್ಕ ಕೇಂದ್ರದ ಕಟ್ಟಡ ಕಾಮಗಾರಿಗೆ ಶಾಸಕ ಟಿ.ಡಿ.ರಾಜೇಗೌಡ ಭೂಮಿಪೂಜೆ ನೆರವೇರಿಸಿದರು. ಸುರಯ್ಯಭಾನು, ಪ್ರಶಾಂತ್ ಎಲ್. ಶೆಟ್ಟಿ, ಉಮಾ, ಪಿ.ಕೆ.ಬಸವರಾಜ್, ಬಿ.ಕೆ.ನಾರಾಯಣಸ್ವಾಮಿ, ಬಿ.ಕೆ.ಜಾನಕೀರಾಂ, ಮಂಜಪ್ಪ ಗೌಡ, ಪಿ.ಆರ್.ಸದಾಶಿವ ಇತರರಿದ್ದರು. 
ಜಿಲ್ಲೆ

2 ಕೋಟಿ ವೆಚ್ಚದಲ್ಲಿ ರೈತ ಸಂಪರ್ಕ ಕೇಂದ್ರ ಕಟ್ಟಡ ನಿರ್ಮಾಣ

ಎಸ್.ಎನ್.ರವೀಂದ್ರ

ಎನ್.ಆರ್.ಪುರ: ಕಸಬಾ ಹೋಬಳಿ ರೈತ ಸಂಪರ್ಕ ಕೇಂದ್ರದ ಕಟ್ಟಡಕ್ಕೆ 2 ಕೋಟಿ ರೂಪಾಯಿ ಮಂಜೂರಾಗಿದ್ದು, ಇದರಲ್ಲಿ 1 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಶುಕ್ರವಾರ ಕೃಷಿ ಇಲಾಖೆಯಲ್ಲಿ ಕಸಬಾ ಹೋಬಳಿ ರೈತ ಸಂಪರ್ಕ ಕೇಂದ್ರದ ಕಟ್ಟಡದ ತಳಪಾಯ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ನಿರ್ಮಿತಿ ಕೇಂದ್ರದವರು ಕಟ್ಟಡ ನಿರ್ಮಿಸಲಿದ್ದಾರೆ ಎಂದರು.

ಕಡಹಿನಬೈಲು ಏತ ನೀರಾವರಿ ಯೋಜನೆಗೆ ಪೈಪ್‌ಲೈನ್ ಹಾಗೂ ಕೆರೆ ಅಭಿವೃದ್ಧಿಗಾಗಿ ಹಿಂದಿನ ಬಜೆಟ್‌ನಲ್ಲಿ 9 ಕೋಟಿ ಮೀಸಲಿಡಲಾಗಿತ್ತು. ಇದನ್ನು 15 ಕೋಟಿಗೆ ಏರಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಗ್ರಾಮೀಣ ರಸ್ತೆಗಳಿಗೆ 10 ಕೋಟಿ ಮಂಜೂರಾಗಿದ್ದು ಶೀಘ್ರದಲ್ಲೇ ರಸ್ತೆ ಕಾಮಗಾರಿ ಪ್ರಾರಂಭಿಸಲಾಗುವುದು. ರಸ್ತೆಯ ಪಕ್ಕದ ಜಂಗಲ್ ಕ್ಲಿಯರ್ ಮಾಡಿಸಲಾಗುವುದು. ಕ್ಷೇತ್ರದಲ್ಲಿ ಮುಖ್ಯ ರಸ್ತೆಗಳ ಗುಂಡಿ ಮುಚ್ಚಲಾಗಿದೆ. ತೀರಾ ಹಾಳಾದ ರಸ್ತೆಗೆ ಮರು ಡಾಂಬರೀಕರಣ ಮಾಡಲಾಗುವುದು. ಜಯಪುರ ಹಾಗೂ ಹರಿಹರಪುರದ ರಸ್ತೆ ಅಗಲೀಕರಣಕ್ಕಾಗಿ 4 ಕೋಟಿ ಮಂಜೂರಾಗಿದೆ. ಎನ್.ಆರ್.ಪುರ ಬಸ್ ನಿಲ್ದಾಣದಿಂದ ಪ್ರವಾಸಿ ಮಂದಿರದವರೆಗೆ ರಸ್ತೆ ಅಗಲೀಕರಣಕ್ಕಾಗಿ 60 ಕೋಟಿ ರೂ. ಪ್ರಸ್ತಾವನೆಯನ್ನು ರಾಜ್ಯ ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಸಲ್ಲಿಸಿದ್ದಾರೆ ಎಂದು ತಿಳಿಸಿದರು.

ತಾಲೂಕು ಕೃಷಿಕ ಸಮಾಜದ ಮಾಜಿ ಅಧ್ಯಕ್ಷ ಬಿ.ಕೆ.ಜಾನಕೀರಾಂ ಮಾತನಾಡಿ, ನಾನು ತಾಲೂಕು ಕಷಿಕ ಸಮಾಜದ ಅಧ್ಯಕ್ಷರಾಗಿದ್ದಾಗ ಟಿಎಪಿಸಿಎಂ ಕಟ್ಟಡದಲ್ಲಿ ಕಚೇರಿ ಮಾಡಿಕೊಳ್ಳಲಾಗಿತ್ತು. ಕಷಿ ಇಲಾಖೆಯ 2 ಎಕರೆ ಜಾಗ ಇದೆ ಎಂದು ನಂತರದ ವರ್ಷಗಳಲ್ಲಿ ಗೊತ್ತಾಯಿತು. ಆ ಜಾಗವು ಒತ್ತುವರಿಯಾಗಿತ್ತು. ಇದರಲ್ಲಿ ಕೆಲ ಜಾಗ ವಶಪಡಿಸಿಕೊಳ್ಳಲಾಗಿದೆ. ರೈತ ಸಂಪರ್ಕ ಕೇಂದ್ರಕ್ಕೆ ಶಾಸಕ ಟಿ.ಡಿ.ರಾಜೇಗೌಡ 2 ಕೋಟಿ ರೂ. ಮಂಜೂರು ಮಾಡಿಸಿರುವುದು ರೈತರಿಗೆ ಸಂತಸ ತಂದಿದೆ ಎಂದರು.

ಜಿಲ್ಲಾ ಕಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಪಿ.ಕೆ.ಬಸವರಾಜ್, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಿ.ಕೆ.ನಾರಾಯಣ ಸ್ವಾಮಿ, ಉಪಾಧ್ಯಕ್ಷ ಮಂಜಪ್ಪ ಗೌಡ, ಪ್ರಧಾನ ಕಾರ್ಯದರ್ಶಿ ನವೀನ್, ಖಜಾಂಚಿ ಚೇತನ್, ನಿರ್ದೇಶಕರಾದ ಎಚ್.ಎನ್.ರವಿಶಂಕರ್, ರಂಜಿತಾ, ಸುಪ್ರೀತಾ, ಶ್ರೀನಿವಾಸ ಗೌಡ, ವೈ.ಎಸ್.ರವಿ, ತಿಮ್ಮಯ್ಯ, ಎನ್.ಪಿ.ರಮೇಶ್, ಪಪಂ ಅಧ್ಯಕ್ಷೆ ಸುರೈಯಾಭಾನು, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್. ಶೆಟ್ಟಿ, ಉಪಾಧ್ಯಕ್ಷೆ ಉಮಾ, ಸದಸ್ಯೆ ಜುಬೇದಾ, ಪಿಸಿಎಆರ್‌ಡಿ ಬ್ಯಾಂಕ್ ಅಧ್ಯಕ್ಷ ಈಚಿಕೆರೆ ಸುಂದರೇಶ್, ಮುಖಂಡರಾದ ಪಿ.ಆ.ರ್.ಸದಾಶಿವ, ಎಂ.ಆರ್.ರವಿಶಂಕರ್, ಎಚ್.ಎಂ.ಶಿವಣ್ಣ, ಬಿ.ವಿ.ಉಪೇಂದ್ರ, ಎನ್.ಪಿ.ರವಿ, ಸಹಾಯಕ ಕಷಿ ನಿರ್ದೇಶಕ ಮಹೇಶ್ ಇದ್ದರು.