ಕಲಬುರಗಿ: ಸತತ ಐದು ವರ್ಷದ ಹೋರಾಟದ ಬಳಿಕ ಸೇಡಂ ತಾಲೂಕಿನ ಮಳಖೇಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇ ಅಲ್ಟಾçಟೆಕ್ ರಾಜಶ್ರೀ ಸಿಮೆಂಟ್ ಕಂಪನಿಯೂ ಗ್ರಾಪಂಗೆ ೨.೦೧ ಕೋಟಿ ರೂ. ತೆರಿಗೆ ಪಾವತಿಸಿದೆ. ಸತತ ಹೋರಾಟಕ್ಕೆ ಸಂದ ಜಯ ಇದಾಗಿದೆ ಎಂದು ಗ್ರಾಪಂ ಸದಸ್ಯ ಉಮೇಶ ಚವ್ಹಾಣ್ ಸಂತಸ ವ್ಯಕ್ತಪಡಿಸಿದರು.
ಸಿಮೆಂಟ್ ಕಂಪನಿಯ ೨೦೧೯ರಿಂದ ಕಾನೂನು ಬದ್ಧವಾಗಿ ಗ್ರಾಮ ಪಂಚಾಯಿತಿಗೆ ಸರಿಯಾಗಿ ತೆರಿಗೆ ಭರಿಸದೆ ಮೋಸ ಮಾಡುತ್ತಿತ್ತು. ಈ ಕುರಿತು ಎಸ್.ಕೆ.ಕಾಂತಾ ನೇತೃತ್ವದಲ್ಲಿ ಗ್ರಾಪಂ ಸದಸ್ಯರು, ಗ್ರಾಮಸ್ಥರೊಂದಿಗೆ ಸತತ ಹೋರಾಟ ನಡೆಸಲಾಗಿತ್ತು. ಕಂಪನಿ ಸೇರಿ ರಾಜ್ಯಪಾಲ, ಮುಖ್ಯಮಂತ್ರಿಯಿAದ ತಹಸೀಲ್ದಾರ್‌ವರೆಗೆ ಎಲ್ಲ ಹಂತದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮನವಿ ಕುರಿತು ಪಂಚಾಯತ್ ರಾಜ್ ಆಯುಕ್ತರು ತನಿಖಾ ತಂಡ ರಚಿಸಿದ್ದರು. ತಂಡದ ಸದಸ್ಯರು ಪರಿಶೀಲಿಸಿ ಸಿಮೆಂಟ್ ಕಂಪನಿಯೂ ವಾರ್ಷಿಕ ೧.೧೬ ಕೋಟಿ ರೂ. ಭರಿಸಬೇಕು ಎಂದು ವರದಿ ಸಲ್ಲಿಸಿದ್ದರು. ಜಿಪಂ ಸಿಇಒ, ತಾಪಂ ಎಇ ಅವರಿಗೆ ತೆರಿಗೆ ಹಣ ವಸೂಲಿಗೆ ಸೂಚಿಸಲಾಗಿತ್ತು. ಅದರಂತೆ ಮಳಖೇಡ, ಊಡಗಿ, ಕೋಡ್ಲಾ, ಬೆನಕನಳ್ಳಿ ಪಿಡಿಒಗಳಿಗೆ ಪತ್ರ ಬರೆದು, ತೆರಿಗೆ ಹಣ ವಸೂಲಿಗೆ ಸೂಚಿಸಲಾಗಿತ್ತು. ಅದರಂತೆ ೨೦೨೪ ನವೆಂಬರ್ ೨೧ರಂದು ಗ್ರಾಪಂ ಕಾರ್ಯಾಲಯಕ್ಕೆ ಎರಡು ವರ್ಷದ ಬಾಕಿ ೨.೦೧ ಕೋಟಿ ರೂ. ತೆರಿಗೆಯ ಡಿಡಿ ಹಸ್ತಾಂತರಿಸಿದ್ದಾರೆ ಎಂದರು. ಇದು ಸತತ ಹೋರಾಟಕ್ಕೆ ಸಿಕ್ಕ ಜಯ ಎಂದರು
ಪ್ರಮುಖರಾದ ಸುನೀಲಕುಮಾರ ನಿಂಗಮಾರಿ, ಚಂದ್ರಶೇಖರ ಕಟ್ಟಿಮನಿ ಉಡಗಿ, ರಮೇಶ ಹಡಪದ ಹಂಗನಳ್ಳಿ, ರೂಪ್ಲಾನಾಯಕ ಪವಾರ ಕುರಕುಂಟಾ, ನೀಲಕಂಠ ತೆಂಗಳಿ ಇತರರಿದ್ದರು.