ನೆಲಮಂಗಲ: ನಗರದ ಬಸ್ ನಿಲ್ದಾಣ ಬಳಿ ದುಷ್ಕರ್ಮಿಗಳು 2 ಅಂಗಡಿಯ ಬೀಗ ಮುರಿದು ಕಳವು ಮಾಡಿದ್ದಾರೆ. ಬುಧವಾರ ತಡರಾತ್ರಿ ನಗರ ಸಾರ್ವಜನಿಕ ಬಸ್ ನಿಲ್ದಾಣದ ಬಳಿಯ ನಂದಿನಿ ಹಾಲಿನ ಕೇಂದ್ರದ ಬೀಗ ಮುರಿದು ಅಂಗಡಿಯಲ್ಲಿದ್ದ 2ಸಾವಿರ ನಗದು, ಕೆಲ ನಂದಿನಿ ಸಿಹಿ ಉತ್ಪನ್ನಗಳನ್ನು ದೋಚಿದ್ದಾರೆ. ಅಲ್ಲದೆ ಸಮೀಪದ ಶ್ರೀ ಬೈರೇವೇಶ್ವರ ಮೆಡಿಕಲ್‌ನ ಬೀಗ ಮುರಿದು 3ಸಾವಿರ ನಗದು ಹಾಗೂ ಕೆಲ ಔಷಧಗಳನ್ನೂ ಕಳವು ಮಾಡಿದ್ದಾರೆ. ಗುರುವಾರ ಬೆಳಗಿನ ಜಾವ ದಿನಪತ್ರಿಕೆ ವಿತರಕ ಸ್ಥಳಕ್ಕೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.