ಕಾರವಾರ: ಲಂಚ ಪಡೆಯುವಾಗ ಸಿಕ್ಕಿ ಬಿದ್ದ ಅರಣ್ಯ ರಕ್ಷಕನಿಗೆ 2 ವರ್ಷ ಜೈಲು ಶಿಕ್ಷೆ (Prison sentence) ಹಾಗೂ 10 ಸಾವಿರ ರೂ. ದಂಡ ವಿಧಿಸಿ, ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ. ಬನವಾಸಿ ವಲಯದ ಎಕ್ಕಂಬಿ ಅರಣ್ಯ ರಕ್ಷಕ ಗುರುಶಾಂತ ಶಿವಪ್ಪ ಸಂಕಣ್ಣವರ್ ಎಂಬಾತನಿಗೆ ಶಿಕ್ಷೆಯಾಗಿದೆ.
Prison sentence ಏಕೆ..?
ಕೂರ್ಸೆ ಶಿವಳ್ಳಿ ಗ್ರಾಮದಲ್ಲಿ 2017 ರಲ್ಲಿ ಬಾವಿ ತೋಡುತ್ತಿರುವ ಬಗ್ಗೆ ಎಫ್ ಐಆರ್ ದಾಖಲಿಸುವುದಾಗಿ ಎಚ್ಚರಿಸಿದ್ದ ಗುರುಶಾಂತ ಹಾಗೆ ಮಾಡದೇ ಇರಲು 10 ಸಾವಿರ ರೂ. ಲಂಚ ಕೇಳಿದ್ದ. 4 ಸಾವಿರ ರೂ. ಲಂಚವನ್ನು ಕೊಡುವಾಗ ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದು ಬಂಧಿತನಾಗಿದ್ದ. ಆತ ಜಾಮೀನಿನ ಮೇಲೆ ಹೊರಗಿದ್ದ. ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಧೀಶ ಡಿ.ಎಸ್.ವಿಜಯಕುಮಾರ್ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ತೀರ್ಪು ಪ್ರಕಟಿಸಿದ್ದಾರೆ. ಆತನ ಜಾಮೀನನ್ನು ರದ್ದು ಮಾಡಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕ ಎಲ್.ಎಂ.ಪ್ರಭು ವಾದ ಮಂಡಿಸಿದ್ದರು.