ಜಿಲ್ಲೆ

ಕೊಲೆಗೆ ಯತ್ನಿಸಿದವನಿಗೆ 2 ವರ್ಷ ಜೈಲು ಶಿಕ್ಷೆ

ಮಂಜುನಾಥ ಅಂಗಡಿ

ಧಾರವಾಡ: ಜಮೀನು ವಿವಾದಕ್ಕೆ ಸಂಬAಽಸಿ ಪರಿಶಿಷ್ಟ ಜಾತಿಯ ವ್ಯಕ್ತಿಯ ಜಾತಿ ನಿಂದನೆ ಮಾಡಿ ಕೊಲೆಗೆ ಯತ್ನಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನಿಗೆ 2 ವರ್ಷ ಜೈಲುಶಿಕ್ಷೆ, 25,000 ರೂ. ದಂಡ ವಿಧಿಸಿ 2ನೇ ಅಽಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬುಧವಾರ ಆದೇಶಿಸಿದೆ.
ಕುಂದಗೋಳ ತಾಲೂಕಿನ ತಿಮ್ಮಾಪುರ ಗ್ರಾಮದ ಸಂಭೋಜಿ ಚವ್ಹಾಣ ಜೈಲುಶಿಕ್ಷೆಗೆ ಗುರಿಯಾದ ವ್ಯಕ್ತಿ. ಈತ 2015ರ ಡಿ. 15ರಂದು ಜಮೀನು ವ್ಯಾಜ್ಯಕ್ಕೆ ಸಂಬ0ಧಿಸಿ ಶಿವಲಿಂಗಪ್ಪ ಮಾದರ ಎಂಬಾತನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿದ ಕುರಿತು ಪ್ರಕರಣ ದಾಖಲಾಗಿತ್ತು. ಈ ಕುರಿತು ಡಿವೈಎಸ್‌ಪಿ ಎಂ.ಎಸ್. ಓಲೇಕಾರ ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧಿಶ ಜೆರಾಲ್ಡ್ ರುಡಾಲ ಮೆಂಡೊನಕಾ ಅವರು ಸಂಭೋಜಿ ಚವ್ಹಾಣಗೆ 2 ವರ್ಷ ಜೈಲುಶಿಕ್ಷೆ, 25,00 ರೂ. ದಂಡ ಹಾಗೂ ಸಂತ್ರಸ್ತನಿಗೆ 15,000 ರೂ. ಪರಿಹಾರಧನ ನೀಡಬೇಕು ಎಂದು ಆದೇಶಿಸಿದ್ದಾರೆ.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಸರೋಜಾ ಜಿ. ಹೊಸಮನಿ ವಾದ ಮಂಡಿಸಿದ್ದರು.