ಜಿಲ್ಲೆ

Video | ಭೀಕರ ಅಪಘಾತ; ಬೈಕ್​ಗೆ ಕಾರು ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು..

ಆನೇಕಲ್: ರಾಜಧಾನಿ ಬೆಂಗಳೂರು ಇದೀಗ ಮತ್ತೊಂದು ಭೀಕರ ಅಪಘಾತಕ್ಕೆ ಸಾಕ್ಷಿಯಾಗಿದೆ. ಇಂದು ರಾತ್ರಿ ಆನೇಕಲ್ ಬಳಿ ಸಂಭವಿಸಿದ ಅಪಘಾತದಲ್ಲಿ ಬೈಕ್​ಗೆ ಕಾರು ಡಿಕ್ಕಿಯಾಗಿ, ದ್ವಿಚಕ್ರವಾಹನ ಸವಾರ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.

ಆನೇಕಲ್ ತಳಿ ರಸ್ತೆ ಸಮೀಪದ ಮುತ್ಯಾಲಮಡುವು ಕ್ರಾಸ್ ಬಳಿ ಈ ಅಪಘಾತ ಸಂಭವಿಸಿದೆ. ಇದರಲ್ಲಿ ಬೈಕ್ ಸವಾರ ಗೊಲ್ಲಹಳ್ಳಿ ರಗೇಶ್ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಅಪಘಾತದ ದೃಶ್ಯಾವಳಿ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ತೆಲಗರಹಳ್ಳಿಯ ರಗೇಶ್ ರಸ್ತೆಯಲ್ಲಿ ದ್ವಿಚಕ್ರ ವಾಹವನ್ನು ತಿರುಗಿಸಿಕೊಂಡು ಹೊರಟಿದ್ದಾಗ ವೇಗವಾಗಿ ಬಂದ ಕಾರು ಅಷ್ಟೇ ರಭಸದಲ್ಲಿ ಬೈಕ್​ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಸವಾರನ ದೇಹ ಒಮ್ಮೆ ಮೇಲಕ್ಕೆ ಹಾರಿ ಬಿದ್ದಿದ್ದು, ಬೈಕ್ ಹಾಗೂ ದೇಹವನ್ನು ಕಾರು ಹತ್ತಾರು ಅಡಿಗಳ ದೂರಕ್ಕೊಯ್ದಿದೆ. ಚಾಲಕ ಕುಡಿದ ಮತ್ತಿನಲ್ಲಿ ಅತಿವೇಗವಾಗಿ ಕಾರು ಚಲಾಯಿಸುತ್ತಿದ್ದುದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಆನೇಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.