ಜಿಲ್ಲೆ

2 ಟಿಪ್ಪರ್, 3 ಟ್ರ‍್ಯಾಕ್ಟರ್ ಜಪ್ತಿ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ತಾಲೂಕಿನ ಸಲಕಿನಕೊಪ್ಪ ವ್ಯಾಪ್ತಿಯ ಸಣ್ಣ ಸೋಮಾಪುರದ ಜಮೀನಿನಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅನುಮತಿ ಇಲ್ಲದೆ ಮೊರಂ ಗಣಿಗಾರಿಕೆಯಲ್ಲಿ ತೊಡಗಿದ್ದ 2 ಟಿಪ್ಪರ್ ಹಾಗೂ 3 ಟ್ರ‍್ಯಾಕ್ಟರ್‌ಗಳನ್ನು ಗುರುವಾರ ಜಪ್ತಿ ಮಾಡಲಾಗಿದೆ. ಖಚಿತ ಮಾಹಿತಿ ಮೇರೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿ ಮಹೇಶ ಗೌಡನಾಯ್ಕರ ಸಿಬ್ಬಂದಿಯೊAದಿಗೆ ಸಂಜೆ ದಾಳಿ ನಡೆಸಿದ್ದರು. ಈ ವೇಳೆ ಅಣ್ಣಿಗೇರಿ ಹಾಗೂ ಹೊಸೂರ ಎಂಬುವರು ಇಲಾಖೆಯ ಅನುಮತಿ ಇಲ್ಲದೆ ಮೊರಂ ಅಗೆದು ಸಾಗಾಟ ಮಾಡುತ್ತಿರುವುದು ಕಂಡುಬAದಿದೆ. ಮೊರಂ ಸಾಗಿಸಲು ಬಳಸುತ್ತಿದ್ದ 2 ಟಿಪ್ಪರ್ ಹಾಗೂ 3 ಟ್ರ‍್ಯಾಕ್ಟರ್‌ಗಳನ್ನು ಜಪ್ತಿ ಮಾಡಿ ಗ್ರಾಮೀಣ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ. ಈ ಕುರಿತು ಭೂಮಾಲೀಕರಿಗೆ ನೋಟಿಸ್ ನೀಡಲಾಗಿದೆ ಎಂದು ಭೂವಿಜ್ಞಾನಿ ಮಹೇಶ ಗೌಡನಾಯ್ಕರ ತಿಳಿಸಿದ್ದಾರೆ.