ಕಂಪ್ಲಿ: ಬ್ಲಾಕ್ ಕಾಂಗ್ರೆಸ್ ಹಾಗೂ ಮೆಟ್ರಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೊಸಕೋಟೆ ಜಗದೀಶ್ ನೇತೃತ್ವದಲ್ಲಿ ಜೆ.ಎನ್.ಗಣೇಶ್ ಅಭಿಮಾನಿಗಳ ಬಳಗದಿಂದ ಗುರುವಾರ ಶಾಸಕ ಜೆ.ಎನ್.ಗಣೇಶ್ ಅವರ 46ನೇ ಜನ್ಮದಿನೋತ್ಸವವನ್ನು ಸಡಗರದಿಂದ ಆಚರಿಸಲಾಯಿತು. ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು, ಹಾಲು, ಬ್ರೆಡ್, ಉಪಾಹಾರ ವಿತರಣೆ, ಪುನೀತ್‌ರಾಜಕುಮಾರ್ ತಂಗುನಿಲ್ದಾಣ ಬಳಿ ಶಾಸಕರ ಕಟೌಟ್‌ಗೆ ಮಾಲಾರ್ಪಣೆ, ಕ್ಷೀರಾಭಿಷೇಕ, ಅನ್ನಸಂತರ್ಪಣೆ ನಡೆಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಮೆಟ್ರಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೊಸಕೋಟೆ ಜಗದೀಶ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ರಘುನಾಯಕ ಮಾತನಾಡಿ, ಶಾಸಕ ಜೆ.ಎನ್.ಗಣೇಶ್ ಅವರು ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸುವ ಗುಣದಿಂದಾಗಿ ಜನಪ್ರಿಯತೆಗಳಿಸಿದ್ದಾರೆ. ಸುಮಾರು 2000ಕೋಟಿ ರೂ. ವೆಚ್ಚದಲ್ಲಿ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಿದ್ದಾರೆ. ಅವರ ಜನಪರ ಕಳಕಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ದೊರಕಬೇಕಿದೆ ಎಂದರು.
ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್, ಸ್ಥಾಯಿಸಮಿತಿ ಅಧ್ಯಕ್ಷ ಎಂ.ಉಸ್ಮಾನ್, ಅರವಿ ಬಸವನಗೌಡ, ಕೆ.ಎಂ.ಹೇಮಯ್ಯಸ್ವಾಮಿ, ಕೆ.ಎಸ್.ಚಾಂದ್‌ಬಾಷಾ, ಪಿ.ಮೂಕಯ್ಯಸ್ವಾಮಿ, ಎಂ.ಸುಧೀರ್, ಎಸ್.ಎಸ್.ಎಂ.ಚನ್ನಯ್ಯಸ್ವಾಮಿ, ವೀರಾಂಜನೇಯಲು, ಬಳೆ ಮಲ್ಲಿಕಾರ್ಜುನ, ಸೈಯ್ಯದ್ ಉಸ್ಮಾನ್, ಲಡ್ಡು ಹೊನ್ನೂರವಲಿ, ಕೆ.ಮಸ್ತಾನ್‌ಸಾಬ್, ಎನ್.ಹಬೀಬ್‌ರೆಹಮಾನ್, ಬಿ.ನಾರಾಯಣಪ್ಪ, ವೈ.ಅಬ್ದುಲ್‌ಮುನಾಫ್, ಬಿ.ವಿ.ಗೌಡ, ಬಿ.ಜಾಫರ್, ಜಿ.ಮರೇಗೌಡ, ಜಿ.ಅಂಜಿನಪ್ಪ, ಇಟಗಿ ಶರಣಬಸವ, ಎಂ.ಜಡೆಪ್ಪ, ಹಂಪಾರೆಡ್ಡಿ, ಮೆಟ್ರಿ ಗಿರಿ, ಸದಾಶಿವಪ್ಪ, ಆರ್.ಪಿ.ಶಶಿಕುಮಾರ್, ಎಚ್.ಗಂಗಾಧರ ಇತರರಿದ್ದರು.
ವಿತರಣೆ: ಮಾರುತಿನಗರದ ಸಕಿಪ್ರಾ ಶಾಲೆ ಮಕ್ಕಳಿಗೆ ಗಣೇಶ್ ಅಭಿಮಾನಿಗಳು ಮಕ್ಕಳಿಗೆ ಸ್ಕೂಲ್‌ಬ್ಯಾಗ್, ನೋಟ್‌ಪುಸ್ತಕ, ಲೇಖನಿ ಸಾಮಗ್ರಿಗಳನ್ನು ವಿತರಿಸಿದರು. ಅಭಿಮಾನಿಗಳಾದ ವಿ.ಮಹ್ಮದ್‌ಗೌಸ್, ಎಂ.ಖಾದರ್‌ಬಾಷಾ, ಸಂಜೀವ, ಕೆ.ಮಲ್ಲಿಕಾರ್ಜುನ, ಸಂತೋಷ್, ಯುನೂಸ್, ಖಾಲಿಚೀಲ ಬಸವರಾಜ,ಮಹ್ಮದ್ ವಾಸೀಮ್ ಇತರರಿದ್ದರು.