ಜಿಲ್ಲೆ

ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 2 ಲಾರಿ ವಶ

ವೀರೇಶ ಸೌದ್ರಿ

ಮುಂಡಗೋಡ: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಎರಡು ಟಿಪ್ಪರ್ ಲಾರಿಗಳನ್ನು ಪಟ್ಟಣದ ಪ್ರವಾಸಿ ಮಂದಿರದ ಬಳಿ ಪೊಲೀಸರು ಭಾನುವಾರ ಬೆಳಗ್ಗೆ ವಶಕ್ಕೆ ಪಡೆದಿದ್ದಾರೆ.

ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಹೇರಿಕೊಂಡು ಲಕ್ಷ್ಮೇಶ್ವರದಿಂದ ಲಾರಿಗಳು ಬರುವ ಬಗ್ಗೆ ಮಾಹಿತಿ ಪಡೆದ ಪಿಎಸ್​ಐ ಪರಶುರಾಮ ಮಿರ್ಜಗಿ, ಸಿಬ್ಬಂದಿ ಗಣಪತಿ ಹೊನ್ನಳ್ಳಿ, ಸಂಜಯ ಅವರು ಮುಂಡಗೋಡದಲ್ಲಿ ತಪಾಸಣೆ ನಡೆಸಿದರು. ಸಾಗಣೆಗೆ ಅನುಮತಿ ಪಡೆಯದಿರುವುದು ಕಂಡು ಬಂದಿದ್ದರಿಂದ ಲಾರಿಗಳನ್ನು ವಶಕ್ಕೆ ಪಡೆದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.

ಗಣಿ ಮತ್ತು ವಿಜ್ಞಾನ ಇಲಾಖೆಯ ಅಧಿಕಾರಿಗಳು ವಿಧಿಸುವ ದಂಡ ಭರಿಸಿದ ನಂತರ ಲಾರಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.