ಜಿಲ್ಲೆ

2 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ ವಂಚಕ

reportermng

ಮಂಗಳೂರು: ಹೊಸ ಬಾಡಿಗೆ ಮನೆ ಮಾಡಿಕೊಡುವುದಾಗಿ ಸಹಾಯ ನೆಪದಲ್ಲಿ ವಂಚಕನೋರ್ವ ಮಹಿಳೆಯೊಬ್ಬರನ್ನು ಹೊಟೇಲ್‌ಗೆ ಕರೆದು 2 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದಾನೆ.


ರಶೀದ್ ಎಂಬಾತ ವಂಚನೆಗೈದ ಆರೋಪಿ.
ತೊಕ್ಕೊಟ್ಟು ನಿವಾಸಿ ಮಹಿಳೆಯೊಬ್ಬರಿಗೆ ಒಳ್ಳೆಯ ಬಾಡಿಗೆ ಮನೆ ತೋರಿಸುವುದಾಗಿ ಹೇಳಿ ಆರೋಪಿ ಬಂದರ್ ಮಸೀದಿಗೆ ಬರಲು ಹೇಳಿದ್ದ. ಅದರಂತೆ ಮಾ.27ರಂದು ಮಹಿಳೆ ಮಸೀದಿಗೆ ಬಂದಾಗ ಅಪರಿಚಿತ ಗಂಡಸು ಮಧ್ಯಾಹ್ನ 1.45ಗಂಟೆಗೆ ಳ್ನೀರ್ ಹೊಟೇಲ್‌ಗೆ ಕರೆದುಕೊಂಡು ಹೋಗಿದ್ದಾನೆ. ಇದಾದ ಬಳಿಕ ‘ಈಗ ಶೇಖ್‌ನ ಹೆಂಡತಿ ಬರುತ್ತಾರೆ, ನಿಮ್ಮ ಮೈಮೇಲಿದ್ದ ಚಿನ್ನಾಭರಣ ನನಗೆ ಕೊಡಿ, ಶೇಖ್‌ಗೆ ಗೊತ್ತಾಗದಂತೆ ಇಟ್ಟುಕೊಳ್ಳುತ್ತೇನೆ. ನಿಮ್ಮ ಚಿನ್ನಾಭರಣ ಶೇಖ್ ನೋಡಿದರೆ ಸಹಾಯ ಮಾಡಲಾರರು’ ಎಂದು ಹೇಳಿದಾಗ ಮಹಿಳೆ ರಶೀದ್ ಮಾತನ್ನು ನಂಬಿ 27ಗ್ರಾಂ ತೂಕದ ಚಿನ್ನಾಭರಣ ತೆಗೆದು ಕೊಟ್ಟರು. ನಂತರ ಸಂಜೆ 4.30ಕ್ಕೆ ರಶೀದ್ ಮಹಿಳೆಯನ್ನು ಳ್ನೀರ್‌ನ ಇನ್ನೊಂದು ಹೊಟೇಲ್‌ಗೆ ಕರೆದುಕೊಂಡು ಹೋಗಿ ಶೇಖ್‌ನ ಹೆಂಡತಿಯನ್ನು ಕರೆದುಕೊಂಡು ಬರುವುದಾಗಿ ಹೇಳಿ ಹೊರಗೆ ಹೋದ ವ್ಯಕ್ತಿ ಮರಳಿ ಬಾರದೆ ನಾಪತ್ತೆಯಾಗ್ದಿದಾನೆ. ಇದರಿಂದ ಆರೋಪಿ ಸುಮಾರು 2ಲಕ್ಷ ರೂ. ಮೌಲ್ಯದ 27ಗ್ರಾಂ ತೂಕದ ಚಿನ್ನಾಭರಣ ವಂಚಿಸಿರುವುದು ಬೆಳಕಿಗೆ ಬಂದಿದೆ.
ನಗರದ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.