????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????? 
ಜಿಲ್ಲೆ

ಬಸ್​ ನಿಲ್ದಾಣ ನವೀಕರಣಕ್ಕೆ 2 ಕೋಟಿ ಅನುದಾನ

ಕೋಲಾರ ಡೆಸ್ಕ್

ಕೆಜಿಎಫ್​- ರಾಜ್ಯ ರಸ್ತೆ ಸಾರಿಗೆ ಅಭಿವೃದ್ಧಿ ಇಲಾಖೆಯು ನಗರದ ಕುವೆಂಪು ಬಸ್​ ನಿಲ್ದಾಣದ ನವೀಕರಣ ಕಾಮಗಾರಿ ಹಾಗೂ ಉನ್ನತಿಕರಣ ಕಾಮಗಾರಿಗಾಗಿ 2 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದೆ ಎಂದು ನಗರಸಭೆ ಪ್ರಭಾರಿ ಪೌರಾಯುಕ್ತ ಮಂಜುನಾಥ್​ ಹೇಳಿದರು.

ನಗರದ ಕುವೆಂಪು ಬಸ್​ ನಿಲ್ದಾಣಕ್ಕೆ ನಗರಸಭೆ ಅಧ್ಯಕ್ಷೆ ಇಂಧಿರಾಗಾಂಧಿ ಹಾಗೂ ರಸ್ತೆ ಸಾರಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ಗುರುವಾರ ಭೇಟಿ ನೀಡಿ, ಪರಿಶೀಲಿಸಿ ಮಾತನಾಡಿದ ಅವರು, ಕುವೆಂಪು ಬಸ್​ ನಿಲ್ದಾಣದಲ್ಲಿ ಕೈಗೊಳ್ಳಬೇಕಾದ ಮೂಲ ಸೌಕರ್ಯಗಳನ್ನು ಪರಿಶೀಲನೆ ನಡೆಸಲು ಆಗಮಿಸಿದ್ದು, 2 ಕೋಟಿ ರೂ. ಅನುದಾನದಲ್ಲಿ ಹೈಟೆಕ್​ ಬಸ್​ ನಿಲ್ದಾಣವನ್ನಾಗಿ ಪರಿವರ್ತಿಸಲಾಗುವುದು ಎಂದು ತಿಳಿಸಿದರು.

ಕುವೆಂಪು ಬಸ್​ ನಿಲ್ದಾಣದಲ್ಲಿ ಶೌಚಗೃಹ ಅಭಿವೃದ್ಧಿ ಹಾಗೂ ನೆಲಹಾಸು, ಕಂಬಗಳಿಗೆ ಹೊಸ ಸ್ಪರ್ಶ, ಚರಂಡಿ ವ್ಯವಸ್ಥೆ ಕಲ್ಪಿಸಲು ಪಟ್ಟಿ ನೀಡಲಾಗಿದ್ದು, ಶೀಘ್ರ ಡಿಪಿಆರ್​ ಮಾಡುವ ಮೂಲಕ ಟೆಂಡರ್​ ಪ್ರಕ್ರಿಯೆಗಳು ನಡೆಯಲಿದೆ ಎಂದರು.