ವಿಜಯವಾಣಿ ಸುದ್ದಿಜಾಲ ಗದಗ
ದನ ಮೇಯಿಸಲು ಹೋಗಿದ್ದ ಇಬ್ಬರು ಬಾಲಕರು ನೀರು ಪಾಲಾಗಿರುವ ಘಟನೆ ಮಂಗಳವಾರ ಶಹರದ ರಹಮತ್ ನಗರದ ಸಮೀಪದಲ್ಲಿ ನಡೆದಿದೆ.
ರಮಮತ್ ನಗರ ಸಮೀಪದ ರೈಲ್ವೆ ಹಳಿ ಪಕ್ಕದಲ್ಲಿರುವ ಹೊಂಡದಲ್ಲಿ ಮಧ್ಯಾಹ್ನ ೧ ಗಂಟೆ ವೇಳೆಗೆ ಈ ಘಟನೆ ನಡೆದಿದ್ದು, ಮಹಮ್ಮದ ಅಮನ್ ಹುಬ್ಬಳ್ಳಿ (೧೨) ಹಾಗೂ ಸಂತೋಷ ಕುಂಬಾರ (೧೪) ಎನ್ನುವ ಬಾಲಕರು ನೀರು ಪಾಲಾಗಿದ್ದಾರೆ. ಸತತ 7 ಗಂಟೆ ಕಾರ್ಯಾಚರಣೆ ನಡೆದರು ಬಾಲಕರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಸಾವನ್ನಪ್ಪಿರುವ ಶಂಕೆ ವ್ಯಕ್ತಪಡಿಸಲಾಗಿದೆ.
ಮಂಗಳವಾರ ಮಧ್ಯಾಹ್ನ ಮಹಿಳೆ ಮತ್ತು ಮೂವರು ಮಕ್ಕಳು ದನ ಮೇಯಿಸಲು ಹೋಗಿದ್ದರು. ದನ ಮೈ ತೊಳೆಯಲು ಹೊಂಡಕ್ಕೆ ಇಳಿದಿದ್ದಾರೆ. ಈ ವೇಳೆ ಕಾಲು ಜಾರಿ ಬಾಲಕರಿಬ್ಬರು ಹೊಂಡಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ. ಬಾಲಕರನ್ನು ರಕ್ಷಿಸಲು ಮಹಿಳೆ ಮತ್ತು ಮತ್ತೊಬ್ಬ ಬಾಲಕ ಹೊಂಡಕ್ಕೆ ಹಾರಿದ್ದಾರೆ. ಮಹಿಳೆಗೆ ಮತ್ತು ಮಕ್ಕಳಿಗೆ ಈಜು ಬಾರದೆ ಸಂಕಷ್ಟ ಎದುರಾಗಿರುವುದನ್ನು ಗಮನಿಸಿದ ರಾಜ್ ಸಿಂಗ್ ಎನ್ನುವ ವ್ಯಕ್ತಿ ಹೊಂಡಕ್ಕೆ ಹಾರಿ, ಮಹಿಳೆ ಮತ್ತು ಬಾಲಕನೊಬ್ಬನನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾನೆ. ಇನ್ನಿಬ್ಬರ ಬಾಲಕರ ರಕ್ಷಣೆಗೆ ಪ್ರಯತ್ನ ನಡೆಸುವಷ್ಟರಲ್ಲಿ ಕಾಲ ಮೀರಿತ್ತು.
ವಿಷಯ ತಿಳಿದು ಸ್ಥಳ್ಕಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ, ಈಜು ತಜ್ಞರು ಬಾಲಕರ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಮಂಗಳವಾರ ಸಂಜೆ ವರೆಗೆ ಕಾರ್ಯಾಚರಣೆ ನಡೆಸಿದ ಬಾಲಕರು ಪತ್ತೆಯಾಗಲಿಲ್ಲ. ಸಚಿವ ಎಚ್.ಕೆ. ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿ, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ. ಈ ಕುರಿತು ಗದಗ ಶಹರ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯಲ್ಲಿ ಅಸ್ವಸ್ಥರಾಗಿರುವ ಮಹಿಳೆಯೊಬ್ಬಳು ಮತ್ತು ಬಾಲಕನೊಬ್ಬನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನಿಬ್ಬರು ಬಾಲಕರ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದ್ದು, ನಾಪತ್ತೆಯಾದ ಬಾಲಕರ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಕೋಟ್:
ಮೂತ್ರ ವಿಸರ್ಜನೆಗೆಂದು ಬಯಲಿಗೆ ಬಂದ ಸಂದರ್ಭದಲ್ಲಿ ಹೊಂಡದಲ್ಲಿ ಬಿದ್ದಿದ್ದ ಮಹಿಳೆ ಹೊರ ಬರಲು ಪ್ರಯತ್ನಿಸುತ್ತಿದ್ಸನ್ನು ಗಮನಿಸಿದೆ. ನೀರೀಗಿಳಿದು ಮಹಿಳೆ ಮತ್ತು ಬಾಲಕನನ್ನು ಹೊರಗೆ ಎಳೆದು ತಂದೆ. ಮರಳಿ ನೀರಿಗೆ ಇಳಿಯುವಷ್ಟರಲ್ಲಿ ಇನ್ನೀಬ್ಬರು ಕೈಗೆಸಿಗಲಿಲ್ಲ.
- ರಾಜ್ ಸಿಂಗ್, ಇಬ್ಬರನ್ನು ಬದುಕಿಸಿದ ವ್ಯಕ್ತಿ
ಕೋಟ್:
ದುರ್ದೈವದ ಘಟನೆ. ಹಲವು ಗಂಟೆಗಳ ಕಾಲ ಕಾರ್ಯಾಚರಣೆ ನಂತರೂ ಇಬ್ಬರೂ ಇನ್ನೂ ಸಿಕ್ಕಿಲ್ಲ. ಅವರು ಬದುಕಿದ್ದಾರೆ ಎನ್ನುವ ಆಶಯವು ಸಹಜವಾಗಿ ಊಳಿದಿಲ್ಲ.
- ಎಚ್.ಕೆ. ಪಾಟೀಲ, ಸಚಿವರು