ಜಿಲ್ಲೆ

ಟೋಲ್​ ಸಿಬ್ಬಂದಿ ಹತ್ಯೆ ಪ್ರಕರಣ; ಇಬ್ಬರನ್ನು ಬಂಧಿಸಿದ ಪೊಲೀಸರು

Webdesk - Manjunatha B

ರಾಮನಗರ: ಬೆಂಗಳೂರು-ಮೈಸೂರು ಧಶಪಥ ಎಕ್ಸ್​ಪ್ರೆಸ್​ವೇ ಶೇಷಗಿರಿಹಳ್ಳಿ ಟೋಲ್ ಪ್ಲಾಜಾ ಬಳಿ ನಡೆದಿದ್ದ ಸಿಬ್ಬಂದಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡದಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಬೆಂಗಳೂರು ಸುಂಕದಕಟ್ಟೆ ಮೂಲದ ಅಭಿಷೇಕ್​(29, ಸಂತೋಷ್(23) ಎಂದು ತಿಳಿದು ಬಂದಿದೆ. ಬಂಧಿತ ಆರೋಪಿಗಳಿಬ್ಬರು ಫುಡ್​ ಡೆಲವರಿ ಬಾಯ್​ಗಳಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಕರಣದ ಹಿನ್ನಲೆ?

ಜೂನ್​ 4ರಂದು ಬೆಂಗಳೂರಿನಿಂದ ಮೈಸೂರು ಕಡೆ ಹೋಗುತ್ತಿದ್ದ ಆರೋಪಿಗಳು ಶೇಷಗಿರಿಹಳ್ಳಿ ಟೋಲ್ ಪ್ಲಾಜಾದಲ್ಲಿ ಹಣ ಕೊಡುವ ವಿಚಾರಕ್ಕೆ ಸಿಬ್ಬಂದಿ ಪವನ್​ ನಾಯಕ್​(26) ಜೊತೆ ಜಗಳ ತೆಗೆದಿದ್ದಾರೆ.

ಈ ವೇಳೆ ಸಿಬ್ಬಂದಿ ಹಾಗೂ ಕಾರಿನಲ್ಲಿ ಬಂದಿದ್ದ ಯುವಕರ ನಡುವೆ ಹೊಡೆದಾಡ ನಡೆದಿದೆ. ಇದನ್ನೇ ಗುರಿಯಾಗಿಸಿಕೊಂಡ ಯುವಕರು ಕೆಲಸ ಮುಗಿಸಿ ಮನೆಗೆ ವಾಪಸ್​ ಹೋಗುತ್ತಿದ್ದ ಪವನ್​ ಹಾಗೂ ಮಂಜುನಾಥ್​ ಎಂಬುವವರ ಮೇಲೆ ಆರೋಪಿಗಳಾದ ಅಭಿಷೇಕ್ ಹಾಗೂ ಸಂತೋಷ್ ಹಾಕಿ ಸ್ಟಿಕ್​ನಿಂದ ಮನಸೋಇಚ್ಛೆ ಹಲ್ಲೆ ನಡೆಸಿ ಪರಾರಿಯಾಗಿದ್ದರು.

ಪವನ್​ ತಲೆಗೆ ತೀವ್ರವಾಗಿ ಗಾಯವಾಗಿದ್ದ ಕಾರಣ ಚಿಕಿತ್ಸೆ ಫಲಕಾರಿಯಗಾದೆ ಮೃತಪಟ್ಟಿದ್ದರು. ಇನ್ನೋರ್ವ ಗಾಯಾಳು ಮಂಜುನಾಥ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.