ತರೀಕೆರೆ: ಶ್ರೀಗುರು ಸಿದ್ದರಾಮೇಶ್ವರ ಪತ್ತಿನ ಸಹಕಾರ ಸಂಘ 2022-23ನೇ ಸಾಲಿನಲ್ಲಿ 2.96 ಕೋಟಿ ರೂ. ವಹಿವಾಟು ನಡೆಸಿ 99 ಸಾವಿರ ರೂ. ಲಾಭಗಳಿಸಿದೆ ಎಂದು ಮಾಜಿ ಶಾಸಕ ಎಸ್.ಎಂ.ನಾಗರಾಜ್ ಹೇಳಿದರು.
ಭಾನುವಾರ ಪಟ್ಟಣದ ಶ್ರೀಗುರು ಸಿದ್ದರಾಮೇಶ್ವರ ಪತ್ತಿನ ಸಹಕಾರ ಸಂಘದಲ್ಲಿ ಏರ್ಪಡಿಸಿದ್ದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿ, 820 ಷೇರುದಾರರನ್ನು ಹೊಂದಿರುವ ಸಂಘದಲ್ಲಿ ವಾಹನ, ಬಂಗಾರ ಸಾಲ ನೀಡಲಾಗುತ್ತಿದೆ. ಮಹಿಳೆಯರ ಸಬಲೀಕರಣಕ್ಕೋಸ್ಕರ ಹೆಚ್ಚು ಒತ್ತು ನೀಡಿದೆ. 13 ಸ್ವ ಸಹಾಯ ಗುಂಪುಗಳಿಗೆ ಸಾಲ ನೀಡಲಾಗಿದೆ ಎಂದರು. ನಿರ್ದೇಶಕರಾದ ಎನ್.ಎಸ್.ಬಸವರಾಜಪ್ಪ, ಮಹೇಶ್ವರಪ್ಪ, ಈಶ್ವರಪ್ಪ, ಎನ್.ಎಚ್.ಜಗದೀಶ್, ಮಲ್ಲಿಕಾರ್ಜುನ, ಶೇಖರಪ್ಪ, ಚನ್ನಬಸಪ್ಪ, ಪ್ರಭುಕುಮಾರ್, ಮೋಹನ್‌ಕುಮಾರ್, ಎಂ.ಎಸ್.ಜಗದೀಶ್, ಶಿವಮೂರ್ತಿ, ಪುಷ್ಪಾ, ಆಶಾ, ಶಾರದಾ, ಪಾಪನಾಯ್ಕ, ಸಿಇಒ ಅರುಣ್‌ಕುಮಾರ್ ಇತರರಿದ್ದರು.