ಹುಬ್ಬಳ್ಳಿ: ಕೆನಡಾ ದೇಶದಲ್ಲಿನ ನೌಕರಿಗೆ ನಿಮ್ಮ ಮಗ ಆಯ್ಕೆಯಾಗಿದ್ದಾನೆಂದು ನಂಬಿಸಿದ ದುರುಳರು, ಧಾರವಾಡದ ಶಿಕ್ಷಕಿಯೊಬ್ಬರಿಂದ ಹಂತ ಹಂತವಾಗಿ ಆನ್ಲೈನ್ ಮೂಲಕ 2.72 ಲಕ್ಷ ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ಫೇಸ್ಬುಕ್ ಪೇಜ್ನಲ್ಲಿದ್ದ ಮಗನ ಮೊಬೈಲ್ ನಂಬರ್ಗೆ ವಾಟ್ಸ್ಆಪ್ ಮೂಲಕ ಸಂರ್ಪಸಿದ್ದಾರೆ. ಕೆನಡಾ ದೇಶದಲ್ಲಿ ನೌಕರಿ ಕೊಡಿಸುತ್ತೇವೆಂದು ಹೇಳಿದ್ದಾರೆ. ಪಾಸ್ಪೋರ್ಟ್, ಪ್ಯಾನ್, ಆಧಾರ್, ಶೈಕ್ಷಣಿಕ ದಾಖಲಾತಿಗಳನ್ನು ಪಡೆದುಕೊಂಡಿದ್ದಾರೆ. ನಂತರ ನಿಮ್ಮ ಮಗ ನೌಕರಿಗೆ ಆಯ್ಕೆಯಾಗಿದ್ದಾನೆ ಎಂದು ನಂಬಿಸಿ ನೇಮಕಾತಿ ಪತ್ರವನ್ನು ವಾಟ್ಸ್ ಆಪ್ ಮೂಲಕ ಕಳುಹಿಸಿದ್ದಾರೆ. ನೇಮಕಾತಿ ಪತ್ರಕ್ಕಾಗಿ 62,005 ರೂ., ವೀಸಾ ಡಿಫಂಡೇಬಲ್ ಅಮೌಂಟ್ ಎಂದು 1.50 ಲಕ್ಷ ರೂ., ಕೋರಂಟೈನ್ ಅಂತ 60 ಸಾವಿರ ರೂ.ಗಳನ್ನು ವಿವಿಧ ಖಾತೆಗಳಿಂದ ಆನ್ಲೈನ್ ಮೂಲಕ ಪಡೆದು ವಂಚಿಸಿದ್ದಾರೆ ಎಂದು ಶಿಕ್ಷಕಿ, ಸಿಇಎನ್ ಕ್ರೖೆಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.