ಯಲ್ಲಾಪುರ: ಮಾಗೋಡ ಹಾಲು ಉತ್ಪಾದಕರ ಸಹಕಾರಿ ಸಂಘವು ಕಳೆದ ವರ್ಷ 2.64 ಲಕ್ಷ ರೂ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ನರಸಿಂಹ ಭಟ್ಟ ಕುಂಕಿಮನೆ ಹೇಳಿದರು.
ಅವರು ಸಂಘದ ಕಾರ್ಯಾಲಯದಲ್ಲಿ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘವು ಎಲ್ಲ ಸದಸ್ಯರ ಸಹಕಾರದೊಂದಿಗೆ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದರು.
ಉಪಾಧ್ಯಕ್ಷ ವೆಂಕಟರಮಣ ಭಾಗ್ವತ, ನಿರ್ದೇಶಕರಾದ ನಾರಾಯಣ ಭಟ್ಟ ದೇವದಮನೆ, ವೆಂಕಟರಮಣ ಭಟ್ಟ ಕಿರಕುಂಭತ್ತಿ, ನರಸಿಂಹ ಭಟ್ಟ ನೇರಲಮನೆ, ಚಂದ್ರಶೇಖರ ಭಟ್ಟ ಕಂಚಿನಮನೆ, ನಾರಾಯಣ ಹೆಗಡೆ, ಗಣಪತಿ ಪಟಗಾರ, ಚೇತನಾ ಹೆಗಡೆ, ಶಾರದಾ ಭಂಡಾರಿ, ಮುಖ್ಯ ಕಾರ್ಯನಿರ್ವಾಹಕ ಬಿ.ಎಸ್.ವೇಲುಮುರುಗನ್ ಇತರರಿದ್ದರು.