ಜಿಲ್ಲೆ

ಕಸಬಾ ಪಿಕೆಪಿಎಸ್‌ಗೆ 2.55 ಲಕ್ಷ ರೂ. ಲಾಭ

Davangere - Prakash Arali

ಚನ್ನಗಿರಿ: ಇಲ್ಲಿನ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2022-23ನೆ ಸಾಲಿನಲ್ಲಿ 2.55 ಲಕ್ಷ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಂ.ನಾಗರಾಜ್ ಹೊಸ ಬನ್ನಿಹಟ್ಟಿ ತಿಳಿಸಿದರು.

ಪಟ್ಟಣದ ಮೌದ್ಗಲ್ ಆಂಜನೇಯ ಸ್ವಾಮಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ದೇಶಿಸಿ ಭಾನುವಾರ ಮಾತನಾಡಿದರು.

ಷೇರು ಬಂಡವಾಳವಾಗಿ ಪ್ರಾರಂಭದಲ್ಲಿ ಸದಸ್ಯರಿಂದ ಒಟ್ಟು 43.19 ಲಕ್ಷ ಸಂಗ್ರಹ ಮಾಡಿದೆ. ಇದ್ದಂತ ಹಣವನ್ನು ವ್ಯಾಪಾರ, ಸಾಲ ಸೇರಿದಂತೆ ವಿವಿಧ ರೀತಿಯಲ್ಲಿ ರೈತರಿಗೆ ಸಹಕಾರ ನೀಡುತ್ತಾ ಬಂದಿದೆ. ಆದ್ದರಿಂದ ಇದುವರೆಗೆ ಸಂಘ ಲಾಭದಲ್ಲಿ ನಡೆಯುತ್ತಾ ಬಂದಿದೆ. ಸಹಕಾರ ಕ್ಷೇತ್ರ ಮೊದಲಿನಿಂದಲು ರೈತರ ಬೆನ್ನಲುಬಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದೆ. ಸಂಕಷ್ಟದಲ್ಲಿ ಇದ್ದಂತ ಸಮಯದಲ್ಲಿ ಎಲ್ಲ ರೀತಿಯಲ್ಲಿ ಸಹಕಾರ ನೀಡಲಾಗುತ್ತದೆ. ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಿಕೊಂಡು ಬರುತ್ತಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಪರಮೇಶ್ವರಪ್ಪ, ಉಪಾಧ್ಯಕ್ಷ ನಿಂಗಪ್ಪ, ನಿರ್ದೇಶಕರಾದ ಕೆ.ಎಂ.ನಿಂಗೋಜಿರಾವ್, ಎಂ.ಶಿವಾಜಿರಾವ್, ಎಚ್.ಎಸ್.ಜಗದೀಶ್, ಎಂ.ಎಸ್.ಮೋಹನ್, ಟಿ.ಎಸ್.ಯೋಗೇಶ್, ನಾಗರಾಜಾಚಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ವಾಮಿ ಲಿಂಗದಳ್ಳಿ, ತುಮ್‌ಕೋಸ್ ನಿರ್ದೇಶಕ ಚಂದ್ರಶೇಖರ್ ಇದ್ದರು.