ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿನ ಹುಂಡಿಗಳಲ್ಲಿನ ಹಣದ ಎಣಿಕೆ ಕಾರ್ಯ ಮಂಗಳವಾರ ಜರುಗಿದ್ದು, ಹುಂಡಿಗಳಲ್ಲಿ 2.53 ರೂ. ನಗದು ಮತ್ತು 0.92 ಗ್ರಾಂ ಬಂಗಾರ, 0.720 ಗ್ರಾಂ ಬೆಳ್ಳಿಯನ್ನು ಭಕ್ತರು ಕಾಣಿಕೆ ರೂಪದಲ್ಲಿ ನೀಡಿದ್ದಾರೆ.
ಶ್ರೀಮಠದಲ್ಲಿ ಬೆಳಗ್ಗೆಯಿಂದ ೆಬ್ರುವರಿ ತಿಂಗಳಲ್ಲಿ ಕಾಣಿಕೆಯಾಗಿ ಬಂದ ಹಣದ ಎಣಿಕೆ ಕಾರ್ಯ ನಡೆಸಲಾಗಿದ್ದು, ಹಿಂದಿನ ತಿಂಗಳಿಗೆ ಹೋಲಿಸಿದಲ್ಲಿ ಈ ತಿಂಗಳಲ್ಲಿ ಭಕ್ತರು ನೀಡಿದ ಕಾಣಿಕೆ ಪ್ರಮಾಣ ಕಡಿಮೆಯಾಗಿದೆ. ಈ ಸಂದರ್ಭದಲ್ಲಿ ಶ್ರೀಮಠದ ವ್ಯವಸ್ಥಾಪಕ ಎಸ್.ಕೆ.ಶ್ರೀನಿವಾಸರಾವ್, ಆಡಳಿತಾಕಾರಿ ಮಾಧವಶೆಟ್ಟಿ ಉಪಸ್ಥಿತರಿದ್ದರು.