ಜಿಲ್ಲೆ

ನಿಡಗೋಡ ಹಾಲು ಸಹಕಾರಿ ಸಂಘಕ್ಕೆ 2. 48 ಲಕ್ಷ ರೂ. ಲಾಭ

ಸಿದ್ದಾಪುರ: ತಾಲೂಕಿನ ನಿಡಗೋಡ ಹಾಲು ಉತ್ಪಾದಕ ಸಹಕಾರಿ ಸಂಘ ಹಾಗೂ ಬಿಎಂಸಿ ಕೇಂದ್ರದ 2022-23ನೇ ಸಾಲಿನಲ್ಲಿ 2. 48 ಲಕ್ಷ ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ಪಿ. ಗೌಡರ್ ಹೂಕಾರ ತಿಳಿಸಿದರು.

ನಿಡಗೋಡಿನ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಶನಿವಾರ ಆಯೋಜಿಸಿದ್ದ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇದೇ ಸಂದರ್ಭದಲ್ಲಿ ನಿಡಗೋಡ ಬಿಎಂಸಿಗೆ ಉತ್ತಮ ಗುಣಮಟ್ಟದ ಹಾಲು ನೀಡಿದ ಕೋಡ್ಸರ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸತೀಶ ಹೆಗಡೆ ಹಾಗೂ ಮುಖ್ಯಕಾರ್ಯನಿರ್ವಾಹಕಿ ವಸುಧಾ ವಿ.ಹೆಗಡೆ ಅವರಿಗೆ ವಾಟರ್ ಫಿಲ್ಟರ್ ನೀಡಿ ಗೌರವಿಸಲಾಯಿತು. ನಿವೃತ್ತ ಶಿರಸ್ತೇದಾರ ಎನ್.ಐ. ಗೌಡ ಅವರನ್ನು ಸನ್ಮಾನಿಸಲಾಯಿತು. ಸಂಘದ ಮುಖ್ಯಕಾರ್ಯನಿರ್ವಾಹಕ ವೆಂಕಟೇಶ ಬಿ.ನಾಯ್ಕ ವಾರ್ಷಿಕ ವರದಿ ವಾಚಿಸಿದರು.

ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಪಿ.ವಿ. ನಾಯ್ಕ ಬೇಡ್ಕಣಿ, ತಾಲೂಕು ವಿಸ್ತರಣಾಧಿಕಾರಿ ಪ್ರಕಾಶ ಕೆ., ಉಪಾಧ್ಯಕ್ಷ ಸುರೇಶ ಟಿ.ನಾಯ್ಕ, ನಿರ್ದೇಶಕರಾದ ಲಕ್ಷ್ಮೀನಾರಾಯಣ ಹೆಗಡೆ, ಷಣ್ಮುಖ ಎಸ್. ಗೌಡರ್, ಕಾಳ ಟಿ. ನಾಯ್ಕ, ರಾಮ ಜಿ. ನಾಯ್ಕ, ಗೌರಿ ಕೃಷ್ಣ ನಾಯ್ಕ, ಮಹೇಶ ಎಸ್. ಗೌಡರ್, ಮಹಾಬಲೇಶ್ವರ ವಿ.ಹೆಗಡೆ ಇತರರಿದ್ದರು.