ಜಿಲ್ಲೆ

2.40 ಲಕ್ಷ ರೂ. ವಂಚನೆ

ಮರಿದೇವ ಹೂಗಾರ

ಹುಬ್ಬಳ್ಳಿ: ಇನ್​ವೆಸ್ಟ್​ಮೆಂಟ್ ಪ್ಲ್ಯಾನಿಂಗ್ ಜಾಹೀರಾತು ನೋಡಿದ ಧಾರವಾಡ ಗುಲಗಂಜಿಕೊಪ್ಪದ ನಿವಾಸಿ ಸುಮಂತ್, ಹೆಚ್ಚಿನ ಲಾಭದ ಆಸೆಗೆ 2.40 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಇನ್​ಸ್ಟಾಗ್ರಾಂ ಮೂಲಕ ಪರಿಚಯವಾದ ಅಪರಿಚಿತರು, ಟ್ರೇಡಿಂಗ್ ಮತ್ತು ಇನ್​ವೆಸ್ಟ್​ಮೆಂಟ್​ನಿಂದ ಹೆಚ್ಚಿನ ಲಾಭ ಗಳಿಸಬಹುದು ಎಂದು ಆಸೆ ತೋರಿಸಿದ್ದಾರೆ. ಹಂತ ಹಂತವಾಗಿ ಆನ್​ಲೈನ್ ಮೂಲಕ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಸಿಇಎನ್ ಕ್ರೖೆಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.