ಕುಡಚಿ: ರಾಯಬಾಗತಾಲೂಕಿನ ಸುಟ್ಟಟ್ಟಿ ಗ್ರಾಮದ ರೈತರೊಬ್ಬರು 2.30 ಲಕ್ಷ ರೂ.ಗೆ ಹೋತ ಮಾರಾಟ ಮಾಡಿ ದಾಖಲೆ ನಿರ್ಮಿಸಿದ್ದಾರೆ.
ರೈತ ಮಹೇಶ ಖೋತ ಅವರು ಸಾಕಿದ ಹೋತಗಳು 1.20 ಲಕ್ಷ ರೂ., ಹಾಗೂ 1.10 ಲಕ್ಷ ರೂ. ಸೇರಿ ಒಟ್ಟು 2.30 ಲಕ್ಷ ರೂ.ಗೆ ಮಾರಾಟವಾಗಿವೆ.
ಮಹೇಶ ಅವರ ತಂದೆ ರಾಯಪ್ಪ ಖೋತ ಅವರದ್ದು, ಅವಿಭಕ್ತ ಕೃಷಿ ಕುಟುಂಬವಾಗಿದ್ದು, ಸುಮಾರು 80 ವರ್ಷಗಳಿಂದ ಹೋತ ಸಾಕಣೆ ಮಾಡುತ್ತಿದ್ದಾರೆ. ಸದ್ಯಕ್ಕೆ ಇವರಲ್ಲಿ 25 ಹೋತ ಹಾಗೂ 12 ಹೋತಗಳು ಇವೆ. ಸಾಮಾನ್ಯ ದಿನಗಳಲ್ಲಿ 10ರಿಂದ 25 ಸಾವಿರ ರೂ. ವರೆಗೆ ಹೋತಗಳು ಮಾರಾಟವಾಗುತ್ತವೆ. ಆದರೆ, ಸೋಮವಾರ ಬಕ್ರೀದ್ ಹಬ್ಬ ಇರುವುದರಿಂದ ವಿಶೇಷವಾದ ಮೇಕೆಗಳಿಗೆ ಬೆಲೆ ಜಾಸ್ತಿ. ಈ ಹಿನ್ನೆಲೆಯಲ್ಲಿ ಹೋತಗಳು ದಾಖಲೆ ಬೆಲೆಗೆ ಮಾರಾಟವಾಗಿವೆ.
ಬಿಟಲ್ ಜಾತಿಗೆ ಸೇರಿದ 150 ಕೆಜಿ ತೂಕದ ಹೋತ 1.20 ಲಕ್ಷ ರೂ. ಹಾಗೂ ಜವಾರಿ ಹೋತ 1.10 ಲಕ್ಷ ರೂ. ಮಾರಾಟವಾಗಿದೆ.