ಜಿಲ್ಲೆ

2.18 ಕೋಟಿ ರೂ. ಶಿಷ್ಯವೇತನದ ಸುಜ್ಞಾನ ನಿಧಿ ವಿತರಣೆ

ಕಡೂರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘಗಳ ಸದಸ್ಯರ ಮಕ್ಕಳಿಗೆ 2.18 ಕೋಟಿ ರೂ. ಶಿಷ್ಯವೇತನದ ಸುಜ್ಞಾನ ನಿಧಿ ನೀಡಲಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಜಿಲ್ಲಾ ನಿರ್ದೇಶಕ ಸದಾಶಿವ ಬಂಗೇರಾ ಹೇಳಿದರು.
ತಾಲೂಕಿನ ಮಲ್ಲೇಶ್ವರ ಗ್ರಾಮದ ಶ್ರೀಸ್ವರ್ಣಾಂಭ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಆಯೋಜಿಸಿದ್ದ ಸುಜ್ಞಾನ ನಿಧಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 17 ವರ್ಷಗಳಿಂದ ಕಡೂರು ತಾಲೂಕಿನಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಜಾರಿಯಲ್ಲಿದೆ. ಡಾ.ವೀರೆಂದ್ರ ಹೆಗ್ಗಡೆ ಮತ್ತು ಮಾತೃ ಶ್ರೀ ಅಮ್ಮನವರ ರಾಮ ರಾಜ್ಯದ ಕನಸು, ಪಾನಮುಕ್ತ ಸಮಾಜ ನಿರ್ಮಾಣ, ಆರ್ಥಿಕವಾಗಿ ಪ್ರಗತಿಹೊಂದಿ ನೆಮ್ಮದಿ ಜೀವನ ನಡೆಸುವ ಪರಿಕಲ್ಪನೆ ಅದ್ಬುತವಾಗಿದೆ ಎಂದರು.
ಗ್ರಾಮಭಿವೃದ್ಧಿ ಯೋಜನೆ ಸಾಲ ಕೊಡುವುದು ಮತ್ತು ವಸೂಲಿ ಮಾಡುವುದಕ್ಕೆ ಮಾತ್ರ ಸೀಮಿತವಾಗದೆ ನೂರಾರು ಜನಪರ ಯೋಜನೆಗಳನ್ನು ಹಾಕಿಕೊಂಡು ಸಂಘದ ಸದಸ್ಯರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಆರ್ಥಿಕವಾಗಿ ಒತ್ತು ನೀಡಿ ಸುಜ್ಞಾನ ನಿಧಿಯಿಂದ ರಾಜ್ಯದಲ್ಲಿ ಈ ಸಾಲಿನಲ್ಲಿ 96 ಸಾವಿರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು 116 ಕೋಟಿ ರೂ. ಹಣವನ್ನು ಮಕ್ಕಳ ಖಾತೆಗೆ ವರ್ಗಾವಣೆ ಮಾಡಲಾಗಿದೆ ಎಂದರು. 187 ಮಕ್ಕಳಿಗೆ ಶಿಷ್ಯವೇತನ ವಿತರಣೆ ಮಾಡಲಾಯಿತು. ಶಿಕ್ಷಕ ರಾಜಶೇಖರ್,ಶ್ರೀ ನಿವಾಸ್ ಮಾತನಾಡಿದರು.ರೋಟರಿಯನ್ ಮಂಜುನಾಥ್,ರವಿಕುಮಾರ್, ಪರ್ತಕರ್ತ ಎ.ಜೆ.ಪ್ರಕಾಶ್ ಮೂರ್ತಿ, ಕಡೂರು ತಾಲೂಕು ಯೋಜನಾ ನಿರ್ದೇಶಕ ಪ್ರಸಾದ್ ಇದ್ದರು.