ಹುಣಸೂರು ಮೈಸೂರು ಹೆದ್ದಾರಿಯ ಮನುಗನಹಳ್ಳಿ ಚೆಕ್‌ಪೋಸ್ಟ್‌ನಲ್ಲಿ ದಾಖಲೆಯಿಲ್ಲದೇ ಸಾಗಿಸುತ್ತಿದ್ದ 2.07 ಲಕ್ಷ ರೂ.ಗಳನ್ನು ಚುನಾವಣಾ ಅಧಿಕಾರಿ ಮುಟ್ಟುಗೋಲು ಹಾಕಿಕೊಂಡರು. ಸುನೀಲ್, ಶೇಕ್ ಹುಸೇನ್, ಶಕೀಲಾ ಹುಸೇನ್ ಇತರರಿದ್ದರು. 
ಜಿಲ್ಲೆ

ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2.07 ಲಕ್ಷ ರೂ. ವಶಕ್ಕೆ

ಹುಣಸೂರು: ದಾಖಲೆಯಿಲ್ಲದೆ ಸಾಗಿಸುತ್ತಿದ್ದ 2.07 ಲಕ್ಷ ರೂ.ಗಳನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

'


ತಾಲೂಕಿನ ಹುಣಸೂರು ಮೈಸೂರು ಹೆದ್ದಾರಿಯ ಮನುಗನಹಳ್ಳಿ ಚೆಕ್‌ಪೋಸ್ಟ್‌ನಲ್ಲಿ ಮಂಗಳವಾರ ಬೆಳಗ್ಗೆ ಚುನಾವಣಾ ಸಿಬ್ಬಂದಿ ವಾಹನಗಳನ್ನು ತಪಾಸಣೆ ನಡೆಸುವ ವೇಳೆ ಮೈಸೂರಿನಿಂದ ಹುಣಸೂರು ಮಾರ್ಗವಾಗಿ ಕೇರಳದ ಕಾಸರಗೋಡಿಗೆ ತೆರಳುತ್ತಿದ್ದ ಕಾರಿನಲ್ಲಿ 2.07,070 ರೂ.ಗಳು ಪತ್ತೆಯಾಯಿತು. ಚೆಕ್‌ಪೋಸ್ಟ್ ಸೆಕ್ಟರ್ ಅಧಿಕಾರಿ ಸುನೀಲ್ ಹಣವನ್ನು ಮುಟ್ಟುಗೋಲು ಹಾಕಿಕೊಂಡರು. ಕಾಸರಗೋಡಿನ ಶೇಕ್ ಹುಸೇನ್ ಅವರಿಗೆ ಸೇರಿದ ಹಣವನ್ನು ಮುಟ್ಟುಗೋಲುಹಾಕಿಕೊಳ್ಳಲಾಗಿದೆ.