ಮಂಗಳೂರು : ದ.ಕ.ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಒಕ್ಕೂಟದಿಂದ ಅ.11ರಿಂದ ಅನ್ವಯವಾಗುವಂತೆ ಹಾಲಿಗೆ ಕನಿಷ್ಠ 2.05 ರೂ. ಪ್ರೋತ್ಸಾಹ ಧನ ನೀಡಲು ನಿರ್ಧರಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ತಿಳಿಸಿದ್ದಾರೆ.
ಗ್ರಾಹಕರಿಗೆ ಪೂರೈಸುವ ಹಾಲಿನ ದರದಲ್ಲಿ ಯಾವುದೇ ಏರಿಕೆ ಮಾಡುವುದಿಲ್ಲ. ಈಗ ಹಾಲಿಗೆ ಕನಿಷ್ಠ ಖರೀದಿ ದರ ಲೀಟರ್‌ಗೆ 29.05 ರೂ ಇದೆ. ನ್ನು 2.05 ರೂ. ಸೇರಿಸಿ 32 ರೂ.ನೀಡಲಾಗುವುದು. ಹೈನುಗಾರರ ನೆರವಿಗೆ ರಾಜ್ಯ ಸರ್ಕಾರದಿಂದ ಪ್ರತಿ ಲೀಟರ್‌ಗೆ 3 ರೂ. ನೆರವು ಕೋರಲಾಗಿದೆ. ಸರ್ಕಾರ ನೆರವು ನೀಡುವವರೆಗೆ ಒಕ್ಕೂಟದ ವತಿಯಿಂದಲೇ ನೆರವು ನೀಡಲು ನಿರ್ಧರಿಸಿದೆ. ಅ.11ರಂದು ಒಕ್ಕೂಟದ ವಿಶೇಷ ಸಭೆ ನಡೆಸಿ ಪ್ರೋತ್ಸಾಹ ಧನ ಘೋಷಿಸಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.