ಜಿಲ್ಲೆ

19ರಿಂದ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ ಗೃಹಶೋಭೆ

ಮೈಸೂರು: ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಮೇ 19ರಿಂದ 28ರವರೆಗೆ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ ‘ಗೃಹಶೋಭೆ’ ಆಯೋಜಿಸಲಾಗಿದೆ.
ಒಂದೇ ಸೂರಿನಡಿ ಆಟೋಮೊಬೈಲ್, ಇಂಟೀರಿಯರ್ಸ್ಸ್, ಪೀಠೋಪಕರಣಗಳ ಪ್ರದರ್ಶನ ಇರಲಿದೆ. ಈ ವರ್ಷ ಹಲವು ವಿಶೇಷತೆಗಳು ಇದ್ದು, ವಿಂಟೇಜ್ ಕಾರು, ಎಲೆಕ್ಟ್ರಿಲ್ ವಾಹನಗಳು ಸೇರಿದಂತೆ ಹಲವು ಬ್ರಾೃಂಡ್‌ಗಳ ವಾಹನಗಳು ಇರಲಿವೆ ಎಂದು ಆಯೋಜಕರಾದ ಸೈಮನ್ ಎಕ್ಸಿಬಿಟರ್ಸ್ ನಿರ್ದೇಶಕ ಎಂ.ಎಸ್. ನಾಗಚಂದ್ರ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೇ 19ರಿಂದ 21ರವರೆಗೆ ಆಟೋಮೊಬೈಲ್ ಎಕ್ಸ್ಪೋ ಇರಲಿದೆ. ಮೇ 24ರಿಂದ 28ರ ವರೆಗೆ ಒಳಾಂಗಣ, ಪೀಠೋಪಕರಣಗಳ ಎಕ್ಸ್ಪೋ ಇರಲಿದೆ. ಇದರಿಂದ ಆಯ್ಕೆಗಳಿಗೆ ಅನುಕೂಲವಾಗಲಿದ್ದು, ಜನರು ಮತ್ತೆ, ಮತ್ತೆ ಬರಲು ಅನುಕೂಲವಾಗಲಿದೆ ಎಂದರು.
ಎಲೆಕ್ಟ್ರಾನಿಕ್ಸ್, ಉಪಕರಣಗಳು, ಆಟೋಮೊಬೈಲ್‌ಗಳು, ಪೀಠೋಪಕರಣಗಳು, ಪೇಂಟಿಂಗ್ಸ್‌ಗಳು, ಕಾರ್ಪೆಟ್‌ಗಳು, ಮಾಡ್ಯುಲರ್ ಕಿಚನ್‌ಗಳಂತಹ ಬ್ರಾಂಡೆಡ್ ಉತ್ಪನ್ನಗಳನ್ನು ಪ್ರದರ್ಶಿಸುವ 200ಕ್ಕೂ ಹೆಚ್ಚು ಮಳಿಗೆಗಳಿವೆ. ರಿಯಾಯಿತಿ, ವಿಶೇಷ ಕೊಡುಗೆಗಳು ಇರಲಿವೆ ಎಂದು ಹೇಳಿದರು.
ಮಾವು, ಹಲವು ಮೇಳ:
ಗೃಹಶೋಭೆ ಅಂಗವಾಗಿ ಈ ಬಾರಿ ವಿಶೇಷವಾಗಿ ಮೇ 23ರಿಂದ 28ರವರೆಗೆ ಹಲವು, ಮಾವು ಮೇಳ ಆಯೋಜಿಸಲಾಗಿದೆ. ಮೈಸೂರು, ಮಂಡ್ಯ, ಚನ್ನಪಟ್ಟಣ, ರಾಮನಗರ, ಕೊಪ್ಪಳ ಸೇರಿದಂತೆ ವಿವಿಧ ಭಾಗದಿಂದ ರೈತರು ನೇರವಾಗಿ ಹಲವು, ಮಾವು ತಂದು ಮಾರಾಟ ಮಾಡಲಿದ್ದಾರೆ ಎಂದು ತಿಳಿಸಿದರು. ಸಂಘಟಕರಾದ ಮುರಳಿಚಂದ್ರನ್ ಇದ್ದರು.