ಚಿತ್ರದುರ್ಗ:ನಗರದ ಎಸ್‌ಆರ್‌ಬಿಎಂಎಸ್ ರೋಟರಿ ಕ್ಲಬ್ ಮತ್ತು ಬಸಪ್ಪಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಸಹಯೋಗದೊಂದಿಗೆ ಸಾಮಾ ನ್ಯ ಪರೀಕ್ಷೆ,ಕೀಲು ಮತ್ತು ಮೂಳೆ,ಸ್ತ್ರೀರೋಗ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಮೇ 19ರಂದು ಬೆಳಗ್ಗೆ 10ಕ್ಕೆ ವೀರವನಿತೆ ಒನಕೆ ಓಬವ್ವ ವೃತ್ತ ಸಮೀಪದ ರೋಟರಿ ಬಾಲಭವನದಲ್ಲಿ ಏರ್ಪಡಿಸಲಾಗಿದೆ. ಡಾ.ಎಚ್.ರವಿ,ಡಾ.ರಂಗಾರೆಡ್ಡಿ,ಡಾ.ಚೈತ್ರಾರವಿ ಅವರು ಶಿಬಿರ ದಲ್ಲಿ ಭಾಗವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸತೀಶ್(7975116428)ಅವರನ್ನು ಸಂಪರ್ಕಿಸುವಂತೆ ರೋಟರಿಕ್ಲಬ್ ಅಧ್ಯಕ್ಷ ಕನಕರಾ ಜು,ಕಾರ‌್ಯದರ್ಶಿ ವಿಕ್ರಾಂತ್ ತಿಳಿಸಿದ್ದಾರೆ.