ಜಿಲ್ಲೆ

19ನೇ ವರ್ಷದ ನಲಂದೋತ್ಸವ ಕಾರ್ಯಕ್ರಮ


ಅರಕಲಗೂಡು: ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗದಂತೆ ಪೋಷಕರು ಜಾಗೃತಿ ವಹಿಸಬೇಕಿದೆ ಎಂದು ಉಳ್ಳೇನಹಳ್ಳಿ ನಳಂದ ವಿದ್ಯಾಸಂಸ್ಥೆ ಅಧ್ಯಕ್ಷ ಇಮ್ರಾನ್ ಕಲೀಲ್ ಕಿವಿಮಾತು ಹೇಳಿದರು.


ತಾಲೂಕು ಕೊಣನೂರಿನ ಉಳ್ಳೇನಹಳ್ಳಿ ನಳಂದ ವಿದ್ಯಾಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ 19ನೇ ವರ್ಷದ ನಲಂದೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದಿನ ಆಧುನಿಕ ಸಮಾಜದಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕಿದೆ. ಆದರೆ ಬಡ ವರ್ಗದ ಮಕ್ಕಳು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು ಗುಣಮಟ್ಟದ ಶಿಕ್ಷಣ ಮರೀಚಿಕೆಯಾಗುತ್ತಿದೆ. ಉಳ್ಳವರಿಗೆ ಸಿಗುತ್ತಿರುವ ಉನ್ನತ ಶಿಕ್ಷಣವು ಹಳ್ಳಿಗಾಡಿನ ಮಕ್ಕಳಿಗೂ ದೊರೆಯುವಚಿತಾದರೆ ಮಾತ್ರ ಉನ್ನತಿ ಕಾಣಲು ಸಾಧ್ಯ. ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸಂಸ್ಥೆ ಮಂಚೂಣಿಯಲ್ಲಿದ್ದು ಮಕ್ಕಳ ಉಜ್ವಲ ಭವಿಷ್ಯಕ್ಕೆ ಶ್ರಮಿಸಲಾಗುತ್ತಿದೆ ಎಂದು ತಿಳಿಸಿದರು.


ಪ್ರಾಂಶುಪಾಲೆ ಶೋಬಿಯಾ ಸಮ್ರೀನ್ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಶಿಕ್ಷಕಿ ಪವಿತ್ರ, ಸಹ ಶಿಕ್ಷಕರಾದ ಸಖಿನ, ಭವ್ಯ, ದಿವ್ಯ, ಆಶಾ, ಅಮೀನ, ನವೀನ್, ಪ್ರಸಾದ್ ಇದ್ದರು.


ನಲಂದೋತ್ಸವ ಅಂಗವಾಗಿ ಮಕ್ಕಳಿಗೆ ನೃತ್ಯ, ಕರಾಟೆ, ನಾಟಕ ಪ್ರದರ್ಶನ ಹಾಗೂ ಪೋಷಕರಿಗೆ ಕಬಡ್ಡಿ, ಓಟ ಸ್ಪರ್ಧೆ, ರಂಗೋಲಿ ಬಿಡಿಸುವುದು, ಹಗ್ಗಜಗ್ಗಾಟ ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.