ಮಂಜುನಾಥ್ 
ಜಿಲ್ಲೆ

19 ರಂದು ದೊಡ್ಡಕೊಡ್ಲಿ ಸರ್ಕಾರಿ ಶಾಲೆ ವಾರ್ಷಿಕೋತ್ಸವ

ಅಭಿನಯ್ ಎಚ್.ಎಂ

ಶನಿವಾರಸಂತೆ: ಸಮೀಪದ ದೊಡ್ಡಕೊಡ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಮತ್ತು ಪಾಲಕರ ದಿನಾಚರಣೆಯನ್ನು ಫೆ.19 ರಂದು ಆಯೋಜಿಸಲಾಗಿದೆ ಎಂದು ಶಾಲೆಯ ಮುಖ್ಯಶಿಕ್ಷಕ ಎಚ್.ಎನ್.ಮಂಜುನಾಥ್ ತಿಳಿಸಿದರು.

ವಾರ್ಷಿಕೋತ್ಸವ ಅಂಗವಾಗಿ ಅಂದು ಬೆಳಗ್ಗೆ 10 ಗಂಟೆಗೆ ಕೊಡ್ಲಿಪೇಟೆ ಗಣಪತಿ ದೇವಸ್ಥಾನದಿಂದ ದೊಡ್ಡಕೊಡ್ಲಿ ಗಣಪತಿ ದೇವಸ್ಥಾನ ವರೆಗೆ ವಿವಿಧ ಕಲಾತಂಡಗಳೊಂದಿಗೆ ವಿಶೇಷ ದಾಖಲಾತಿ ಆಂದೋಲನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ. ಮೆರವಣಿಗೆಯಲ್ಲಿ ವಿವಿಧ ಸಂಘ-ಸಂಸ್ಥೆಗಳು ಮತ್ತು ಕೊಡ್ಲಿಪೇಟೆ ಕ್ಲಸ್ಟರ್ ವ್ಯಾಪ್ತಿಯ ಶಾಲಾ ಮಕ್ಕಳು ಪಾಲ್ಗೊಳ್ಳುತ್ತಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪಾಲಕರ ದಿನಾಚರಣೆ ಅಂಗವಾಗಿ ಶಾಲಾ ಮೈದಾನದಲ್ಲಿ ಪುರುಷ ಮತ್ತು ಮಹಿಳೆಯರಿಗೆ ಆಟೋಟ ಸ್ಪರ್ಧೆ ಏರ್ಪಡಿಸಲಾಗಿದೆ. ಪುರುಷರಿಗೆ ಹಗ್ಗಜಗ್ಗಾಟ, ಮಡಕೆ ಒಡೆಯುವುದು, ಸಂಗೀತ ಕುರ್ಚಿ ಹಾಗೂ ಮಹಿಳೆಯರಿಗೆ ಥ್ರೋಬಾಲ್, ಹಗ್ಗಜಗ್ಗಾಟ, ಸಂಗೀತ ಕುರ್ಚಿ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದರು.
ಗಣಪತಿ ಬಾಯ್ಸ ಯುವಕ ಸಂಘದ ಅಧ್ಯಕ್ಷ ಯೋಗಾನಂದ್ ಮಾತನಾಡಿ, ಫೆ.18 ರಂದು ದೊಡ್ಡಕೊಡ್ಲಿ ಗಣಪತಿ ಬಾಯ್ಸ ಯುವಕ ಸಂಘದ ವತಿಯಿಂದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ನಾಗೇಶ್, ಸರ್ಕಾರಿ ನೌಕರರ ಸಂಘದ ತಾಲೂಕು ನಿರ್ದೇಶಕ ಎಸ್.ಎಂ.ಸುರೇಶ್, ಒಕ್ಕಲಿಗ ಯುವ ವೇದಿಕೆ ಅಧ್ಯಕ್ಷ ಸಚಿನ್, ಗಣಪತಿ ಬಾಯ್ಸ ಯುವಕ ಸಂಘದ ಸದಸ್ಯ ಕಿಶೋರ್ ಹಾಜರಿದ್ದರು.