ಧಾರವಾಡ: ಜಿಲ್ಲೆಯಲ್ಲಿ ಭಾನುವಾರ 194 ಕರೊನಾ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ಒಟ್ಟು ಪ್ರಕರಣಗಳ ಸಂಖ್ಯೆ 9242ಕ್ಕೇರಿದೆ. 6531 ಜನ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2440 ಪ್ರಕರಣಗಳು ಸಕ್ರಿಯವಾಗಿವೆ. 68 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಭಾನುವಾರ ಮೂವರು ಮೃತಪಟ್ಟಿದ್ದಾರೆ. ಈವರೆಗೆ ಸಾವಿಗೀಡಾದವರ ಸಂಖ್ಯೆ 271ಕ್ಕೆ ಏರಿದೆ.
ಭಾನುವಾರ ಪ್ರಕಟವಾದ ಪ್ರಯೋಗಾಲಯ ವರದಿಯಲ್ಲಿ ಹುಬ್ಬಳ್ಳಿಯಲ್ಲೇ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಧಾರವಾಡ ನಗರ ಹಾಗೂ ಗ್ರಾಮೀಣ ಸೇರಿ 30 ಪ್ರದೇಶಗಳಲ್ಲಿ ಪ್ರಕರಣಗಳು ಪತ್ತೆಯಾಗಿದ್ದರೆ, ಹುಬ್ಬಳ್ಳಿ ನಗರ ಹಾಗೂ ಗ್ರಾಮೀಣ ಸೇರಿ ಅಂದಾಜು 55 ಪ್ರದೇಶಗಳಲ್ಲಿ ಪ್ರಕರಣಗಳು ಪತ್ತೆಯಾಗಿವೆ. ಕೆಲ ಪ್ರದೇಶಗಳಲ್ಲಿ ಒಂದಕ್ಕಿಂತಲೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ.
ಕಲಘಟಗಿ ತಾಲೂಕಿನ ಹುಣಸಿಕಟ್ಟಿ, ಮಿಶ್ರಿಕೋಟಿ, ದೇವಿಕೊಪ್ಪ, ಜೋಡಳ್ಳಿ; ನವಲಗುಂದ ತಾಲೂಕು ಶಿರೂರ ಗ್ರಾಮದ ಕುರಬಗೇರಿ ಓಣಿ, ಹಿರೇಮಠ ರಸ್ತೆ; ಕುಂದಗೋಳದ ಯರಗುಪ್ಪಿ ಕುರಬರ ಓಣಿ, ಕಮಡೊಳ್ಳಿ, ಗುಡಗೇರಿ ಪೊಲೀಸ್ ವಸತಿಗೃಹ, ಹೈದರಾಲಿ ದರ್ಗಾ ಓಣಿ, ಬೆಟದೂರ ರಾಣಿ ಚನ್ನಮ್ಮ ಹಾಸ್ಟೆಲ್; ಅಣ್ಣಿಗೇರಿಯ ಗಣೇಶ ದೇವಾಲಯ, ಅಂಕ್ಲಿ ಓಣಿ, ಗಾಂಧಿನಗರದಲ್ಲಿ ಪ್ರಕರಣಗಳು ಪತ್ತೆಯಾಗಿವೆ. ಇತರ ಜಿಲ್ಲೆಗಳ ಏಳೆಂಟು ಪ್ರಕರಣಗಳು ಧಾರವಾಡ ಜಿಲ್ಲೆಯ ಆಸ್ಪತ್ರೆಗೆ ದಾಖಲಾಗಿವೆ.