ಜಿಲ್ಲೆ

190 ಲೀಟರ್​ ಮದ್ಯ ವಶ

Avinash R

ಕಾಸರಗೋಡು: ಮಧೂರು ಸನಿಹದ ಉಳಿಯತ್ತಡ್ಕದಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 190.8 ಲೀ. ಅಕ್ರಮ ಮದ್ಯ ಹಾಗೂ ಸಂಚಾರಕ್ಕೆ ಬಳಸಿದ್ದ ಕಾರನ್ನು ಅಬಕಾರಿ ದಳ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.

ವಾಹನ ತಪಾಸಣೆ ಮಾಡುವಾಗ ಆಗಮಿಸಿದ ಕಾರಿಗೆ ಸೂಚನೆ ನೀಡಿದರೂ, ನಿಲ್ಲಿಸದೆ ಪರಾರಿಯಾಗಲೆತ್ನಿಸಿದಾಗ ಸಾಹಸದಿಂದ ಹಿಂಬಾಲಿಸುತ್ತಿದ್ದಂತೆ ಚಾಲಕ ಕಾರು ನಿಲ್ಲಿಸಿ ಪರಾರಿಯಾಗಿದ್ದಾನೆ. ತಲೆಮರೆಸಿಕೊಂಡಿರುವ ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.