ಜಿಲ್ಲೆ

19 ವರ್ಷದೊಳಗಿನ ವಿಭಾಗದಲ್ಲಿ ಬೀದರ್ ಕ್ರೀಡಾಪಟುಗಳ ಸಾಧನೆ

ಬೀದರ್: ದಿ.ಸಂಜಯಕುಮಾರ ದುಬಲಗುಂಡೆ ಸ್ಮರಣಾರ್ಥ ಜಿಲ್ಲಾ ಬ್ಯಾಡ್ಮಿಂಟನ್ ಅಸೋಶಿಯೇಷನ್ ಮತ್ತು ಜಿಲ್ಲಾ ಯುವ ಸಬಲೀಕರಣ ಇಲಾಖೆಯಿಂದ ನಗರದ ನೆಹರು ಕ್ರೀಡಾಂಗಣ ಸಮೀಪದ ಒಳಾಂಗಣ ಕ್ರೀಡಾಂಗಣದಲ್ಲಿ ಎರಡು ದಿನ ಆಯೋಜಿಸಿದ ಅಂತಾರಾಜ್ಯ ಶೆಟಲ್ ಬ್ಯಾಡ್ಮಿಂಟನ್ ಮುಕ್ತ ಪಂದ್ಯಾವಳಿಗೆ ತೆರೆ ಬಿದ್ದಿದೆ. 16, 19 ವರ್ಷದೊಳಗಿನ ವಿಭಾಗದಲ್ಲಿ ಬೀದರ್ ಕ್ರೀಡಾಪುಟಗಳು ಸಾಧನೆ ಮೆರೆದಿದ್ದಾರೆ.

ರಾಜ್ಯ ಸೇರಿದಂತೆ ನೆರೆ ರಾಜ್ಯದ 150ಕ್ಕೂ ಹೆಚ್ಚು ಕ್ರೀಡಾಪಟುಗಳು ಆಗಮಿಸಿದ್ದರು. 40 ವರ್ಷ ಮೇಲ್ಪಟ್ಟ ಪುರುಷರ ಡಬಲ್ಸ್ನಲ್ಲಿ ಕಿರಣ್ ಬೆಂಗಳೂರು ತಂಡ (ಪ್ರಥಮ), ಜಾಕೀರ್ ಕಲಬುರಗಿ ತಂಡ (ದ್ವಿತೀಯ), ಫಾರೂಖ್ ಖಾದ್ರಿ-ಇರ್ಫಾನ್ ಬೀದರ್(ತೃತೀಯ). ಪುರುಷರ ಮುಕ್ತ ಸಿಂಗಲ್ಸ್ ನಲ್ಲಿ ಗಣೇಶ ಬಾರಾಮತಿ (ಪ್ರಥಮ), ಫಿರೋಜ್ ಕಲಬುರಗಿ (ದ್ವಿತೀಯ), ಪ್ರಶಾಂತ ಶಿವಮೊಗ್ಗ (ತೃತೀಯ). ಪುರುಷರ ಮುಕ್ತ ಡಬಲ್ಸ್ನಲ್ಲಿ ಪ್ರಶಾಂತ ತಂಡ (ಪ್ರಥಮ), ಜಾಕೀರ್ ಫಿರೋಜ್ ಕಲಬುರಗಿ (ದ್ವಿತೀಯ), ಗಣೇಶ-ಅಥರ್ವ ಲಾಠೆ (ತೃತೀಯ).

16 ವರ್ಷದೊಳಗಿನ ಬಾಲಕರ ಸಿಂಗಲ್ಸ್ ನಲ್ಲಿ ನೆಹಾಲ್ ಸೋನಾರೆ ಬೀದರ್ (ಪ್ರಥಮ), ಪ್ರಣವ್ ಕಲಬುರಗಿ (ದ್ವಿತೀಯ), ಆದಿತ್ಯ ವಾಂಖೇಡೆ ಬಾರ್ಸಿ (ತೃತೀಯ). 19 ವರ್ಷದೊಳಗಿನ ಬಾಲಕರ ಸಿಂಗಲ್ಸ್ ನಲ್ಲಿ ನೆಹಾಲ್ ಸೋನಾರೆ ಬೀದರ್ (ಪ್ರಥಮ), ಶುಭಂ ಕಲಬುರಗಿ (ದ್ವಿತೀಯ), ಅಥರ್ವ ಬಾರ್ಸಿ (ತೃತೀಯ). 19 ವರ್ಷದೊಳಗಿನ ಬಾಲಕಿಯರ ಡಬಲ್ಸ್ ನಲ್ಲಿ ವಿದ್ಯಾಶ್ರೀ-ಸಾಕ್ಷಿ ಬೀದರ್ (ಪ್ರಥಮ), ಕೃತಿಕಾ-ಗೌರಿ ಬೀದರ್ (ದ್ವಿತೀಯ), ಸಂಚನಾ-ಗಾಯತ್ರಿ ಬೀದರ್(ತೃತೀಯ) ಸ್ಥಾನ ಪಡೆದರು.

ಸಮಾರೋಪದಲ್ಲಿ ಕರ್ನಾಟಕ ಕೈಗಾರಿಕಾ ಮತ್ತು ಮೂಲಸೌಲಭ್ಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ ಅವರು ವಿಜೇತರಿಗೆ ಬಹುಮಾನ, ಟೋಫಿ ವಿತರಿಸಿದರು. ಬ್ಯಾಡ್ಮಿಂಟನ್ ಅಸೋಶಿಯೇಷನ್ ಜಿಲ್ಲಾಧ್ಯಕ್ಷಡಾ.ಮಕ್ಸೂದ ಚಂದಾ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ ನಾಡಗೀರ್, ರೇಖಾ ದುಬಲಗುಂಡೆ, ಪ್ರಕಾಶ ಭೂರೆ, ಡಾ.ಶಿವಶಂಕರ ಭತಮುರ್ಗೆ, ಓಂಕಾರ ಭತಮುರ್ಗೆ, ಡಾ.ಬಸವರಾಜ, ಡಾ.ನರಸಪ್ಪ ಇತರರಿದ್ದರು.