ಮಂಗಳೂರು: ದೇಶದ ಪ್ರತಿಷ್ಠಿತ ಸಂಸ್ಥೆಯಾದ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ತನ್ನ ಸಿಎಸ್‌ಆರ್ ಯೋಜನೆಯಡಿ ದ.ಕ ಜಿಲ್ಲೆಯ 180 ಅಂಗನವಾಡಿ ಕೇಂದ್ರಗಳಿಗೆ ವಾಟರ್ ಪ್ಯೂರಿಫೈಯರ್ ಕೊಡುಗೆ ನೀಡಿದೆ. ದಕ್ಷಿಣ ಕನ್ನಡದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಎಂಆರ್‌ಪಿಲ್ ತನ್ನ ಸಿಎಸ್‌ಆರ್ ಉಪಕ್ರಮವಾದ ಆರೋಗ್ಯ ಸಂರಕ್ಷಣಾ ಮೂಲಕ 50 ಲಕ್ಷ ಆರ್ಥಿಕ ನೆರವು ನೀಡಿದೆ.
ಜಿಲ್ಲೆಯಾದ್ಯಂತ ಇರುವ ಅಂಗನವಾಡಿ ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರಿನ ಸೌಲಭ್ಯ ನೀಡಿಲು ಈ ಅನುಧಾನ ಬಳಸಿಕೊಳ್ಳಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ಧರಿಸಿದೆ. ಅ.7ರಂದು ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಎಂಆರ್‌ಪಿಎಲ್‌ನಿಂದ ಉದ್ದೇಶ ಪತ್ರವನ್ನು ಸಲ್ಲಿಸಲಾಯಿತು. ಈ ಉಪಕ್ರಮವು ಸೂರಿಂಜೆ, ಬಾಳ, ಜೋಕಟ್ಟೆ ಮತ್ತು ಕಾಳಾವರದಂತಹ ಎಂಆರ್‌ಪಿಎಲ್‌ಗೆ ಸಮೀಪವಿರುವ ಪ್ರದೇಶಗಳು ಮತ್ತು ಶುದ್ಧ ನೀರಿನ ಲಭ್ಯತೆ ಸೀಮಿತವಾಗಿರುವ ದೂರದ ಸುಳ್ಯ, ಪುತ್ತೂರು ಮತ್ತು ಬೆಳ್ತಂಗಡಿ ಸೇರಿದಂತೆ ಜಿಲ್ಲೆಯಾದ್ಯಂತದ ಹಳ್ಳಿಗಳಿಗೆ ಪ್ರಯೋಜನವಾಗಲಿದೆ.