ಕಲಬುರಗಿ: ಗುಲ್ಬರ್ಗ ಲೋಕಸಭೆ (ಎಸ್ಸಿ, ಮೀಸಲು) ಕ್ಷೇತ್ರಕ್ಕೆ ಮೇ ೭ರಂದು ನಡೆಯಲಿರುವ ಚುನಾವಣೆಗೆ ಶನಿವಾರ ನಾಮಪತ್ರ ಪರಿಶೀಲನೆ ನಡೆದಿದ್ದು, ೧೮ ಅಭ್ಯರ್ಥಿಗಳ ೨೬ ನಾಮಪತ್ರ ಕ್ರಮಬದ್ಧವಾಗಿವೆ. ಐದು ಅಭ್ಯರ್ಥಿಗಳು ಒಳಗೊಂಡAತೆ ಒಟ್ಟು ೧೦ ನಾಮಪತ್ರ ತಿರಸ್ಕೃತವಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.
ನಾಮಪತ್ರ ಪುರಸ್ಕೃತ ಅಭ್ಯರ್ಥಿಗಳ ವಿವರ: ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ, ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ಉಮೇಶ ಗೋಪಾಲದೇವ, ಭಾರತೀಯ ಜನ ಸಾಮ್ರಾಟ್ ಪಾರ್ಟಿ ಅಭ್ಯರ್ಥಿ ತಾರಾಬಾಯಿ ಬೋವಿ, ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಅಭ್ಯರ್ಥಿ ಶರಣಬಸಪ್ಪ ಮಲ್ಲಿಕಾಜಪ್ಪ, ಪ್ರಹಾರ ಜನಶಕ್ತಿ ಪಾರ್ಟಿ ಅಭ್ಯರ್ಥಿ ವಿಜಯಕುಮಾರ ಭೀಮಶಾ, ಉತ್ತಮ ಪ್ರಜಾಕೀಯ ಪಾರ್ಟಿ ಅಭ್ಯರ್ಥಿ ನಾಗೇಂದ್ರ ಎಚ್, ಕರ್ನಾಟಕ ರಾಷ್ಟç ಸಮಿತಿ ಪಕ್ಷದ ಅಭ್ಯರ್ಥಿ ವಿಜಯ ಜಾಧವ್, ಭಾರತೀಯ ಬಹುಜನ ಕ್ರಾಂತಿ ದಳ ಅಭ್ಯರ್ಥಿ ರಾಜಕುಮಾರ ಗೋಪಿನಾಥ, ಬಹುಜನ್ ಸಮಾಜ ಪಾರ್ಟಿ ಅಭ್ಯರ್ಥಿ ಹುಚ್ಚಪ್ಪ ಬಸಪ್ಪ, ಸ್ವತಂತ್ರ ಅಭ್ಯರ್ಥಿಗಳಾದ ರಮೇಶ ಭೀಮಸಿಂಗ್, ವಿಲಾಸ ಎಂ.ಕಣಮಸ್ಕರ್, ಕಾಶೀನಾಥ ಸಾಯಬಣ್ಣ ಪಾಪಿ, ಆನಂದ ಸಿದ್ದಣ್ಣ, ಶರಣಬಸಪ್ಪ ಪೀರಪ್ಪ, ಶರಣಪ್ಪ ಮರಲಿಂಗಪ್ಪ, ವೆಂಕಟೇಶ್ವರರಾವ ಅಮೃತರಾವ, ಜ್ಯೋತಿ ರಮೇಶ ಹಾಗೂ ಸುಂದರ ಮೇಘು ಅವರ ನಾಮಪತ್ರಗಳು ಪುರಸ್ಕೃತಗೊಂಡಿವೆ.
ನಾಮಪತ್ರ ಸಲ್ಲಿಕೆಗೆ ಏ.೧೯ರವರೆಗೆ ೨೩ ಅಭ್ಯರ್ಥಿಗಳಿಂದ ೩೬ ನಾಮಪತ್ರ ಸಲ್ಲಿಕೆಯಾಗಿದ್ದವು. ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ಏಪ್ರಿಲï ೨೨ ಕೊನೆ ದಿನವಾಗಿದೆ.
ಬಾಕ್ಸ್
ತಿರಸ್ಕೃತ ಅಭ್ಯರ್ಥಿಗಳು
ಭಾರತೀಯ ಪೀಪಲ್ಸï ಪಾರ್ಟಿ ಅಭ್ಯರ್ಥಿ ಶಂಕರ ಜಾಧವ್, ರಾಷ್ಟಿçÃಯ ಸಮಾಜ ಪP್ಷÀ ಅಭ್ಯರ್ಥಿ ಶಿವಪುತ್ರ ಮರೆಪ್ಪ, ಸ್ವತಂತ್ರ ಅಭ್ಯರ್ಥಿಗಳಾದ ಶಶಿಧರ ಬಸವರಾಜ, ರವೀಂದ್ರ ಕಲ್ಲಯ್ಯ ಸ್ವಾಮಿ ಹಾಗೂ ಹುಸೇನಪ್ಪ ಬಂದೆಪ್ಪ ನಾಮಪತ್ರ ತಿರಸ್ಕೃತಗೊಂಡಿವೆ.