ರಟ್ಟಿಹಳ್ಳಿ: ತಾಲೂಕಿನಲ್ಲಿ ಸೋಮವಾರ ಒಟ್ಟು 18 ಮನೆಗಳು ಭಾಗಶಃ ಹಾನಿಗೀಡಾಗಿವೆ. ಜಮೀನುಗಳಿಗೆ ನೀರು ನುಗ್ಗಿ ಸುಮಾರು 560 ಹೆಕ್ಟೇರ್ ಬೆಳೆ ಹಾನಿಯಾಗಿದೆ.
ತಾಲೂಕಿನಲ್ಲಿ ಮಕರಿ&2, ಮಾಸೂರು&2, ನಾಗವಂದ&2, ಚಿಕ್ಕಯಡಚಿ&1, ಹೊಸಳ್ಳಿ&4, ಗುಂಡಗಟ್ಟಿ&1, ಮೇದೂರು&1, ಶಿರಗಂಬಿ&1, ಕುಡುಪಲಿ&1, ಚಟ್ನಳ್ಳಿ&1, ಹಿರೇಮತ್ತೂರು&1, ಚಪ್ಪರದಹಳ್ಳಿ&1 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ತಾಲೂಕಿನಾದ್ಯಂತ ಕೆರೆ, ಹಳ್ಳಗಳು ತುಂಬಿ ಹರಿಯುತ್ತಿವೆ. ಕಟಾವಿಗೆ ಬಂದಿರುವ ಮೆಕ್ಕೆಜೋಳ ಬೆಳೆ ಕೆಲವಡೆ ಬಿದ್ದು ಮೊಳಕೆ ಒಡೆಯಲು ಪ್ರಾರಂಭಿಸಿವೆ.
ತಾಲೂಕಿನ ಹಿರೇಮೊರಬ ಗ್ರಾಮದ ಬಳಿ ಹಳ್ಳ ತುಂಬಿ ಸೋಮವಾರ ಹೆದ್ದಾರಿಯ ಮೇಲೆ ನೀರು ಹರಿಯುತ್ತಿದ್ದರಿಂದ ಕೆಲ ಸಮಯ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಶಿರಗಂಬಿ&ಸತ್ತಗಿಹಳ್ಳಿ ಗ್ರಾಮಗಳ ನಡುವಿನ ಹಳ್ಳ ತುಂಬಿ ಜನರ ಸಂಚಾರಕ್ಕೆ ತೊಂದರೆಯಾಗಿದೆ.
ಈಗಾಗಲೇ 550 ಹೆಕ್ಟೇರ್ ಕೃಷಿ ಬೆಳೆ ಮತ್ತು 10 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಮಳೆ ಕಡಿಮೆಯಾದ ಬಳಿಕ ಸರ್ವೇ ಮಾಡಿ ಬೆಳೆ ಹಾನಿ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.ಕೆ. ಗುರುಬಸವರಾಜ, ತಹಸೀಲ್ದಾರ್ ರಟ್ಟಿಹಳ್ಳಿ.