ರಿಪ್ಪನ್‌ಪೇಟೆಯ ಹಿಂದು ರಾಷ್ಟçಸೇನಾ ಗಣೇಶನ ಮೂರ್ತಿಯನ್ನು ಶುಕ್ರವಾರ ಬೆಳಗ್ಗೆ ಗವಟೂರು ತಾವರೆಕೆರೆಯಲ್ಲಿ ಜಲಸ್ತಂಭನ ಮಾಡಲಾಯಿತು. 
ಜಿಲ್ಲೆ

18 ಗಂಟೆಗಳ ಸುಽÃರ್ಘ ಮೆರವಣಿಗೆ

Shivamogga - Desk - Megha MS

ರಿಪ್ಪನ್‌ಪೇಟೆ: ಪಟ್ಟಣದ ತಿಲಕ್ ಮಂಟಪದಲ್ಲಿ ಪ್ರತಿಷ್ಠಾಪಿಸಿದ್ದ ಕರ್ನಾಟಕ ಪ್ರಾಂತೀಯ ಹಿಂದು ರಾಷ್ಟçಸೇನಾ ಗಣೇಶ ಮೂರ್ತಿಯ ರಾಜಬೀದಿ ಉತ್ಸವ ಗುರುವಾರ ಸಂಜೆ 5 ಗಂಟೆಗೆ ಚಾಲನೆ ಪಡೆದುಕೊಂಡು ಶುಕ್ರವಾರ ಬೆಳಗ್ಗೆ 11.15 ಗಂಟೆಗೆ ಗವಟೂರು ತಾವರೆ ಕೆರೆಯಲ್ಲಿ ಜಲಸ್ತಂಭನದ ಮೂಲಕ ಗಣೇಶೋತ್ಸವ ಕಾರ್ಯಕ್ರಮ ಸಂಪನ್ನವಾಯಿತು.

18 ಗಂಟೆಗಳ ಸುದೀರ್ಘಕಾಲದ ರಾಜಬೀದಿ ಉತ್ಸವದಲ್ಲಿ ವಿವಿಧ ಬಗೆಯ ಮಂಗಳವಾದ್ಯ, ಜಾನಪದ ಮತ್ತು ಸಾಂಸ್ಕೃತಿಕ ಕಲಾ ತಂಡದಿAದ ಮನರಂಜನೆ ಹಾಗೂ ವಿನಾಯಕ ವೃತ್ತದಲ್ಲಿ ತಡರಾತ್ರಿಯಿಂದ ಮುಂಜಾನೆವರೆಗೆ ಶಿವಮೊಗ್ಗ ಗೀತಾ ತಂಡದಿAದ ರಸಮಂಜರಿ ಕಾರ್ಯಕ್ರಮ ನಡೆಯಿತು.
ಇಡೀ ಪಟ್ಟಣದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಮುಂಜಾಗ್ರತಾ ಕ್ರಮವಾಗಿ ತೀರ್ಥಹಳ್ಳಿ ಪೊಲೀಸ್ ಉಪ ಅಽÃಕ್ಷಕ ಗಜಾನನ ವಾಮನ ಸುತಾರ, ವೃತ್ತ ನಿರೀಕ್ಷಕ ಗುರಪ್ಪ ಹೆಬ್ಬಾಳ್, ಪಿಎಸ್‌ಐ ಪ್ರವೀಣ್ ನೇತೃತ್ವದಲ್ಲಿ 100 ಪೊಲೀಸರು, 100 ಗೃಹ ರಕ್ಷಕದಳದ ಸಿಬ್ಬಂದಿ ಭದ್ರತೆ ನಿರ್ವಹಿಸಿದರು.
ರಾಜಬೀದಿ ಉತ್ಸವದಲ್ಲಿ ಹೊಸನಗರ ತಹಸೀಲ್ದಾರ್ ರಾಕೇಶ್, ವಿವಿಧ ಬಡಾವಣೆಯ ಸಂಘ ಸಂಸ್ಥೆಗಳು ಮಾಲಾರ್ಪಣೆ ಮಾಡಿದರು. ಮೆರವಣಿಗೆಯಲ್ಲಿ ಸಾರ್ವಜನಿಕರಿಗೆ ಊಟ, ಉಪಾಹಾರ ವ್ಯವಸ್ಥೆಯನ್ನು ವಿವಿಧ ದಾನಿಗಳು ಏರ್ಪಡಿಸಿದ್ದರು. ಉತ್ಸವದಲ್ಲಿ ಅಧ್ಯಕ್ಷ ನಾಗರಾಜ್ ಪವಾರ್, ಕಾರ್ಯದರ್ಶಿ ಲಕ್ಷ÷್ಮಣ್ ಬಳ್ಳಾರಿ, ಮುಖಂಡ ಶ್ರೀನಿವಾಸಾಚಾರಿ, ವಾಸು ಶೆಟ್ಟಿ, ಸುಽÃಂದ್ರ ಪೂಜಾರಿ, ಎಂ.ಬಿ. ಮಂಜುನಾಥ, ಸುರೇಶ ಸಿಂಗ್, ಆರ್.ರಾಘವೇಂದ್ರ, ತೀರ್ಥೇಶ, ಗವಟೂರು ಗಣಪತಿ, ಲಕ್ಷ÷್ಮಣ ಆಟೋ, ಯೋಗೀಶ, ರವಿಭೂಷಣ್, ಭಾಸ್ಕರ ಶೆಟ್ಟಿ, ದೇವರಾಜ್ ಇತರರಿದ್ದರು.