ಜಿಲ್ಲೆ

18-45 ಮಂಗಳೂರಿನಲ್ಲಿ ನಾಳೆಯಿಂದ ಲಸಿಕೆ

ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹದಿನೆಂಟರ ಮೇಲ್ಪಟ್ಟ ವಯಸ್ಕರಿಗೆ ಮೇ 11ರಿಂದ ಲಸಿಕೆ ನೀಡಲಾಗುವುದು.

18-45ರ ನಡುವಿನ ವಯೋಮಾನದವರಿಗಾಗಿ
ಸುಮಾರು 6500 ಲಸಿಕೆಗಳನ್ನು ರಾಜ್ಯಸರ್ಕಾರ ಒದಗಿಸುತ್ತಿದೆ.

ಸೀಮಿತ ಸಂಖ್ಯೆಯಲ್ಲಿ ಲಸಿಕೆ ಬರಲಿದ್ದು ಸೋಮವಾರ ಸಂಜೆಯೊಳಗೆ ಲಸಿಕೆ ಮಂಗಳೂರು ತಲಪಲಿದೆ.
ಅಲ್ಲದೆ ಕೇಂದ್ರದಿಂದ 10000 ಕೋವಿಶೀಲ್ಡ್ ಲಸಿಕೆ ಕುರಿತು ಪೂರೈಸಲಾಗುತ್ತಿದೆ. ಇದನ್ನು ದ್ವಿತೀಯ ಡೋಸೇಜ್‌ಗೆ ಬಳಸಿಕೊಳ್ಳಲಾಗುವುದು.
ಉಳಿದಂತೆ 360 ಮಂದಿಗೆ ಸೋಮವಾರ(ಇಂದು) ಕೋವ್ಯಾಕ್ಸಿನ್ ಲಸಿಕೆಯನ್ನು ವೆನ್ ಲಾಕ್ ಆಸ್ಪತ್ರೆಯಲ್ಲಿ ಹಾಕಲಾಗುತ್ತದೆ, ಫಲಾನುಭವಿಗಳಿಗೆ ಈಗಾಗಲೇ ಈ ಕುರಿತು ಎನ್‌ಐಸಿಯಿಂದ ಸಂದೇಶ ರವಾನಿಸಲಾಗಿದೆ.