ಜಿಲ್ಲೆ

17ರಂದು ಮಾನವ ಸಬಲೀಕರಣ ಕಾರ್ಯಾಗಾರ

ಹಾಸನ: ಶೂನ್ಯ ಫೌಂಡೆಷನ್ ವತಿಯಿಂದ ನ. 17ರಂದು ಅರಸೀಕೆರೆ ತಾಲೂಕಿನ ಜಾವಗಲ್‌ನಲ್ಲಿ ಮಾನವ ಸಬಲೀಕರಣ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಫೌಂಡೆಷನ್ ಮುಖ್ಯಸ್ಥ ಡಾ. ಜಿ.ಪಿ ಶಿವಕುಮಾರ್ ತಿಳಿಸಿದರು.

ಜಾವಗಲ್‌ನ ಹಾರನಹಳ್ಳಿ ರಸ್ತೆ ವಾಟರ್ ಟ್ಯಾಂಕ್ ಬಳಿ ನ.17ರಂದು ಬೆಳಗ್ಗೆ 9 ಗಂಟೆಗೆ ಕಾರ್ಯಕ್ರಮ ಉದ್ಘಾಟನೆಯಾಗಲಿದೆ. 11ರಿಂದ 1 ಗಂಟೆಯವರೆಗೂ ಆಯುರ್ವೇದ ಮತ್ತು ನ್ಯಾಚುರೋಪಥಿ ಆಲೋಪತಿ ಮತ್ತು ದಂತ ವೈದ್ಯರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ ್ಳಲಾಗಿದೆ. ಪ್ರವೇಶ ಶುಲ್ಕವಾಗಿ 300 ರೂ. ನಿಗದಿ ಮಾಡಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಯುವ ಪೀಳಿಗೆಯಲ್ಲಿ, ರೈತರಲ್ಲಿ ಮತ್ತು ನಾಗರಿಕರಲ್ಲಿ ವೃತ್ತಿಪರತೆಯನ್ನು ಮತ್ತು ಆಧುನಿಕ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸಲು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಮುಖ್ಯವಾಗಿ ಕೃಷಿ, ಆರೋಗ್ಯ, ಆದಾಯ, ಆಧುನಿಕ ಶಿಕ್ಷಣ, ಉದ್ಯೋಗ, ಕಾನೂನು ಸಲಹೆ, ಯೋಗ ಮತು ್ತ ಆಧ್ಯಾತ್ಮ ವಿಷಯಗಳ ಬಗ್ಗೆ ಒಂದೇ ಸೂರಿನಡಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಕಾನೂನು ಸಂಬಂಧಿತ ಮಾಹಿತಿ ಹಾಗೂ ಸಲಹೆಗಳು, ಸಾವಯವ ಕೃಷಿ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಕುರಿತು ರೈತರಿಗೆ ಸಲಹೆ ಸೂಚನೆಗಳನ್ನು ನೀಡಲಾಗುವುದು. ಸ್ಪರ್ಧಾತ್ಮಕ ಜಗತ್ತಿನಲಿ ್ಲ ವಾಣಿಜ್ಯ ವಿದ್ಯಾರ್ಥಿಗಳಿಗೆ ಇರುವ ಅವಕಾಶಗಳು, ವಿದೇಶಗಳಲ್ಲಿ ಉದ್ಯೋಗ ಹಾಗೂ ವಿದ್ಯಾಭ್ಯಾಸದ ಅವಕಾಶಗಳ ಕುರಿತು ಮಾಹಿತಿಯನ್ನು ನೀಡಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಡಾ. ಮೇಘನಾ ಇದ್ದರು.