ಗುಂಡ್ಲುಪೇಟೆ ಪಟ್ಟಣದ ಭಾವಸಾರ ಕ್ಷತ್ರಿಯ ಸಮಾಜ ಮಂಡಲಿಯ ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಮಕ್ಕಳು ಶ್ರೀಕೃಷ್ಣ ಮತ್ತು ರಾಧೆಯ ವೇಷಧರಿಸಿ ಸ್ಪರ್ಧೆಯಲ್ಲಿ ಪಾಲ್ಗೊಂಡರು.
ಗುಂಡ್ಲುಪೇಟೆ: ಪಟ್ಟಣದ ಭಾವಸಾರ ಕ್ಷತ್ರಿಯ ಸಮಾಜ ಮಂಡಲಿ ವತಿಯಿಂದ ಇತ್ತೀಚೆಗೆ 17ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. ಕೃಷ್ಣನ ಕುರಿತು ಭಜನೆ, ಮಕ್ಕಳಿಂದ ಕೃಷ್ಣ ಹಾಗೂ ರಾಧೆಯರ ವೇಷಭೂಷಣ ಸ್ಪರ್ಧೆ ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಭಾವಸಾರ ಕ್ಷತ್ರಿಯ ಸಮಾಜ ಮಂಡಲಿ ಅಧ್ಯಕ್ಷ ಕೆ.ವಿ.ಶಂಕರರಾವ್, ಉಪಾಧ್ಯಕ್ಷ ಮೋಹನ್‌ರಾವ್, ಪ್ರಧಾನ ಕಾರ್ಯದರ್ಶಿ ಶಿವಕುಮಾರ್, ಖಜಾಂಚಿ ಪಿ.ಜಿ.ವಿಶ್ವನಾಥರಾವ್ ಪತಂಗೆ, ವಿ.ಎಸ್.ನವೀನ್ ವಾದೋನೆ ಸೇರಿದಂತೆ ಹಲವರು ಇದ್ದರು.