ಕೆ.ಆರ್.ನಗರ: ಪ್ರಪಂಚದಾದ್ಯಂತ ವಿವಿಧ ಧರ್ಮಗಳಿವೆ ಆದರೆ ನಮ್ಮ ದೇಶದ ಯೋಗವನ್ನು ಎಲ್ಲಾ ಜಾತಿ, ಧರ್ಮ ಮರೆತು ಬಹುತೇಕ ದೇಶಗಳು ಒಪ್ಪಿ ಅಳವಡಿಸಿಕೊಂಡಿವೆ ಅದಕ್ಕೆ ಮೂಲ ಕಾರಣ ಯೋಗಕ್ಕೆ ಇರುವ ಮಹತ್ವ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜ್ ಹೇಳಿದರು.
ಪಟ್ಟಣದ ರೋಟರಿ ಭವನ ಆವರಣದಲ್ಲಿ ಪತಂಜಲಿ ಯೋಗ ಟ್ರಸ್ಟ್, ರೋಟರಿ ಸಂಘ ಹಾಗು ನಂ.1 ಕನ್ನಡ ದಿನ ಪತ್ರಿಕೆ ವಿಜಯವಾಣಿ ಸಹಯೋಗದೊಂದಿಗೆ ಏರ್ಪಡಿಸಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಮ್ಮ ದೇಶದ ಮೂಲ ಶಿಕ್ಷಣವಾದ ಯೋಗ ಪ್ರಪಂಚದ ವಿವಿಧ ದೇಶಗಳಿಗೆ ವಿಸ್ತರಿಸಿದ್ದು, ಈ ಯೋಗದಿಂದ ಶರೀರಕ್ಕೆ ವಿವಿಧ ರೀತಿ ಅನುಕೂಲವಿರುವುದನ್ನು ಕಂಡ ಪ್ರಪಂಚದ 171 ರಾಷ್ಟ್ರಗಳು ವಿಶ್ವ ಯೋಗದಿನವನ್ನಾಗಿ ಜೂನ್ 21ರಂದು ಆಚರಿಸಲಾಗುತ್ತಿದೆ ಇದು ಭಾರತ ಹೆಮ್ಮೆಯ ಸಂಗತಿ ಎಂದರು.
ಯೋಗಾಚಾರ್ಯ ವಿಶ್ವನಾಥ್‌ಶೆಟ್ಟಿ ಮಾತನಾಡಿ ನಮ್ಮ ಜೀವನಕ್ಕೆ ಯೋಗ ಅತ್ಯಂತ ಮಹತ್ವದಾಗಿದೆ ಈ ಯೋಗಾಸನವೆಂದರೆ ಬರಿ ಆಸನವಲ್ಲ. ಇದು ರೋಗಗಳ ಗುಣಪಡಿಸಲು ಸಹಕಾರಿಯಾಗಿದೆ ಎಂದರು. ವಂದೇ ಮಾತಂ ಗೋಪಾಲ್ ಯೋಗ ದಿನದ ಮಹತ್ವ ವಿವರಿಸಿರು.
ಈ ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷ ನಾಗರಾಜಬಾವಿಕಟ್ಟೆ, ಯೋಗಾಪಟು ರವಿಕುಮಾರ್, ಚಂದ್ರಶೇಖರ್‌ರಾವ್, ಮೋಹನ್‌ಕುಮಾರ್, ಶಶಿಭೂಷಣ, ಡಾ.ಅಜಯ್, ಸದನಂದಮೂರ್ತಿ, ಆನಂದ್, ಅರುಣ್ ಬಿ.ನರಗುಂದ, ಎಚ್.ಆರ್.ಅರುಣ್‌ಕುಮಾರ್, ವೈ.ಎಸ್.ಕುಮಾರ್, ಸೋಮಸುಂದರ್, ರಾ.ಸುರೇಶ್, ಉಷಾರಾವ್, ನಾಗವೇಣಿ, ರಾಜಶ್ರೀಕಾಂತ್, ಆನಂದ್, ಸ್ಪಿನ್‌ಕೃಷ್ಣ, ರೇವಣ್ಣ, ರಾಮಸ್ವಾಮಿ, ಕೋಮಲಾಶಿವನಂಜಪ್ಪ, ಮಂಜುಳಾಚಿಕ್ಕವೀರು, ಸಿ.ಎಂ.ರೇಖಾ, ವೆಂಕಟೇಶ್‌ಬಾಬು, ಸತ್ಯನಾರಾಯಣಶೆಟ್ಟಿ, ಬಾಬುರಾವ್, ಪ್ರಸಾದ್, ರಾಮಪ್ಪ, ಕಲ್ಪನಾ, ಕೃಷ್ಣಮೂರ್ತಿ ಇತರರು ಇದ್ದರು.