ತುಮಕೂರು: ಕಳೆದ ನಾಲ್ಕು ತಿಂಗಳಲ್ಲಿ ವಿವಿಧ ಪ್ರಕರಣದಲ್ಲಿ ದರೋಡೆ ಮಾಡಿದ್ದ 5.61 ಕೋಟಿ ರೂಪಾಯಿ ಚಿನ್ನಾಭರಣ ಪತ್ತೆ ಮಾಡಿರುವ ಜಿಲ್ಲೆಯ ಪೊಲೀಸರು, ಬರೋಬ್ಬರಿ 170 ಕಳ್ಳರನ್ನು ಜೈಲಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಎಸ್ಪಿ ಕೆ.ವಿ.ಅಶೋಕ್ ಮಂಗಳವಾರ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತುಮಕೂರಿನ ರಿಂಗ್ ರಸ್ತೆಯಲ್ಲಿ ಟ್ರಕ್ನಲ್ಲಿ ಮಲಗಿದ್ದವರ ಕಾಲಿಗೆ ಚುಚ್ಚಿ ದರೋಡೆ ಮಾಡಿದ್ದ ಪ್ರಕರಣ ಸೇರಿ 7 ಮನೆಗಳವು, ಮಾಂಗಲ್ಯ ಸರ ಕಿತ್ತು ಪರಾರಿಯಾಗುತ್ತಿದ್ದ ತಮಿಳುನಾಡು ತಂಡ ಸೇರಿ ಎಲ್ಲ ಕಳ್ಳರನ್ನು ಜೈಲಿಗಟ್ಟಲಾಗಿದೆ ಎಂದರು. ಲಾಭಕ್ಕಾಗಿ ಕೊಲೆ ಪ್ರಕರಣ, 3 ದರೋಡೆ ಪ್ರಕರಣ, 5 ಸುಲಿಗೆ ಪ್ರಕರಣ, 21 ಸರಗಳ್ಳತನ ಪ್ರಕರಣ, 38 ಮನೆ ಕನ್ನಕಳವು, 53 ಸಾಮಾನ್ಯ ಕಳವು ಮತ್ತು 8 ಗಮನವನ್ನು ಬೇರೆಡೆ ಸೆಳೆದು ಕಳವು ಮತ್ತು 1 ಸೈಬರ್ ಅಪರಾಧ ಪ್ರಕರಣ ಸೇರಿ ಒಟ್ಟು 130 ಪ್ರಕರಣ ಪತ್ತೆ ಮಾಡಲಾಗಿದೆ ಎಂದರು.
ಬಂಧಿತರಿಂದ 4 ಕೆಜಿ 31 ಗ್ರಾಂ ಚಿನ್ನಾಭರಣ, 7 ಕೆಜಿ 207 ಗ್ರಾಂ ಬೆಳ್ಳಿಯ ಆಭರಣ, 99 ಬೈಕ್ಗಳು, 4 ನಾಲ್ಕು ಚಕ್ರದ ವಾಹನಗಳು, 1 ಆಟೋರಿಕ್ಷಾ, 2 ಟ್ರಾ$್ಯಕ್ಟರ್ಗಳು, 3 ಲಕ್ಷ ಮೌಲ್ಯದ ಜಾನುವಾರುಗಳು, ಕೊಬ್ಬರಿ, ಅಡಕೆ ಸೇರಿದಂತೆ 36.73 ಲಕ್ಷದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಪತ್ತೆಗೆ ಶ್ರಮಿಸಿದ ಅಧಿಕಾರಿ, ಸಿಬ್ಬಂದಿಗಳನ್ನು ಅಭಿನಂದಿಸಲಾಯಿತು. ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಗೋಪಾಲ್, ಪುರುಷೋತ್ತಮ ಇದ್ದರು.
ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ ವಿರುದ್ಧ ಸುಾರಿ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಸಾಕ್ಷ$್ಯವಾಗಿ ನೀಡಿರುವ ಆಡಿಯೋ ಸೇರಿ ಕೆಲವು ವಸ್ತುಗಳನ್ನು ಎ್ಎಸ್ಎಲ್ ಪರೀೆಗೆ ಕಳುಹಿಸಲಾಗಿದ್ದು, ಅಲ್ಲಿಂದ ವರದಿ ಬಂದ ನಂತರ ತನಿಖೆ ಮುಂದುವರಿಯಲಿದೆ.| ಕೆ.ವಿ.ಅಶೋಕ್ ಎಸ್ಪಿ