ಜಿಲ್ಲೆ

17 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದು ಪರಾರಿ

ಹಾಸನ: ನಗರದ ಗಾಂಧಿ ಬಜಾರ್‌ನಲ್ಲಿರುವ ಚಿನ್ನ ಬೆಳ್ಳಿ ಅಂಗಡಿಯಲ್ಲಿ ಕೆಲಸಕ್ಕಿದ್ದ ವ್ಯಕ್ತಿಯೊಬ್ಬ ಬರೋಬ್ಬರಿ 17 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ


ಗುರುಮೂರ್ತಿ ಎಂಬುವರು, ಗಾಂಧಿಬಜಾರ್ ಸೊಸೈಟಿ ರಸ್ತೆಯಲ್ಲಿರುವ ವಾಸವಿ ನಿಲಯ ಕಟ್ಟಡದಲ್ಲಿ 20 ವರ್ಷಗಳಿಂದ ಚಿನ್ನ-ಬೆಳ್ಳಿ ಅಂಗಡಿ ಇಟ್ಟು ಕೊಂಡಿದ್ದು, ಹೊಸದಾಗಿ ಚಿನ್ನಾಭರಣ ತಯಾರಿಸುವುದು ಹಾಗೂ ಮಾರಾಟ ಮಾಡುವ ವೃತ್ತಿ ಮಾಡುತ್ತಿದ್ದರು.


ಅದೇ ಅಂಗಡಿಯಲ್ಲಿ ಕಳೆದ 7 ವರ್ಷಗಳಿಂದ ಪಶ್ಚಿಮ ಬಂಗಾಳ ಮೂಲದ ಬಿಸ್ಪಾಜಿತ್ ಸಹೀಶ್ ಎಂಬಾತ ಕೆಲಸ ಮಾಡಿಕೊಂಡಿದ್ದ. ಡಿ.13 ರಂದು ಎಂದಿನಂತೆ ಕೆಲಸಕ್ಕೆ ಬಂದಿದ್ದು, ಅಂಗಡಿಯಲ್ಲಿದ್ದ ಸುಮಾರು 17 ಲಕ್ಷ ರೂ.ಬೆಲೆಯ 325 ಗಾಂ. ತೂಕದ ಅಪರಂಜಿ ಚಿನ್ನ ತೆಗೆದುಕೊಂಡು ಪರಾರಿಯಾಗಿದ್ದಾನೆ. ಅಲ್ಲಿಂದ ಕೆಲಸಕ್ಕೆ ಬಾರದ ಕಾರಣ ಮಾಲೀಕರು ಅನುಮಾನದಿಂದ ನಗರ ಠಾಣೆಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.