ಯಲ್ಲಾಪುರ: ಹಿಂಸಾತ್ಮಕವಾಗಿ, ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಕೋಣ ಹಾಗೂ ಎತ್ತುಗಳನ್ನು ಕ್ಯಾಂಟರ್ ಸಮೇತವಾಗಿ ಪಟ್ಟಣದ ಜೋಡುಕೆರೆ ಬಳಿ ಪೊಲೀಸರು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.
ಮೈಸೂರಿನ ಸದ್ದಾಂ ಹುಸೇನ್ ಹಾಗೂ ಚಿತ್ರದುರ್ಗದ ಇಸ್ಮಾಯಲ್ ಬಂಧಿತರು. ಇವರು ಬೆಳಗಾವಿಯ ಕಿತ್ತೂರಿನಿಂದ ಕೇರಳದ ಕಾಸರಗೋಡಿಗೆ 13 ಕೋಣ ಹಾಗೂ 4 ಎತ್ತುಗಳನ್ನು ಸಾಗಿಸುತ್ತಿದ್ದರು. ವಶಪಡಿಸಿಕೊಂಡ ಕ್ಯಾಂಟರ್ ಹಾಗೂ ಜಾನುವಾರು ಮೊತ್ತ 6 ಲಕ್ಷ ರೂಪಾಯಿ ಎಂದು ಪೊಲೀಸರು ಅಂದಾಜಿಸಿದ್ದಾರೆ. ಪಿಎಸ್‌ಐ ಮಹಾವೀರ ಕಾಂಬ್ಳೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.