ಚಿಕ್ಕಮಗಳೂರು: ಕ್ರಿಶ್ಚಿಯನ್ ವಿವಿಧೋz್ದÉÃಶ ಸಹಕಾರ ಸಂಘ ೨೦೨೩-೨೪ನೇ ಸಾಲಿನಲ್ಲಿ ೧೭.೨೪ ಲಕ್ಷ ರೂ. ನಿವ್ವಳ ಲಾಭಗಳಿಸಿದ್ದು, ಷೇರುದಾರರಿಗೆ ೧೩.೫ ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಎಸ್.ಎಫ್.ಲೂಯೀಸ್ ತಿಳಿಸಿದರು.
ನಗರದ ಜುಬಿಲಿ ಹಾಲ್‌ನಲ್ಲಿ ನಡೆದ ೧೫ನೇ ವರ್ಷದ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಠೇವಣಿ, ಪಿಗ್ಮಿ, ಉಳಿತಾಯ ಖಾತೆ, ಷೇರು ಧನ ಮುಂತಾದವುಗಳಿAದ ೬.೭೫ ಕೋಟಿ ರೂ. ಸಂಗ್ರಹಿಸಲಾಗಿದೆ ಎಂದರು.
ಸಹಕಾರ ಸಂಘದಿAದ ಸದಸ್ಯರಿಗೆ ಗೃಹ ಸಾಲ, ಸಂಬಳ ಅಧಾರಿತ ಸಾಲ, ವೈಯಕ್ತಿಕ ಸಾಲ, ವ್ಯಾಪಾರ ಅಭಿವೃದ್ಧಿ ಸಾಲ, ಠೇವಣಿ ಮೇಲಿನ ಸಾಲ, ಪಿಗ್ಮಿ ಸಾಲ ಈ ರೀತಿಯ ಸಾಲಗಳನ್ನು ಈ ಸಾಲಿನ ಅಂತ್ಯಕ್ಕೆ ೪ ಕೋಟಿ ರೂ. ವಿತರಿಸಲಾಗಿದೆ. ಸಹಕಾರ ಸಂಘ ೬೨೦ ಜನ ಷೇರುದಾರರನ್ನು ಹೊಂದಿದ್ದು, ಈ ಸಾಲಿನಲ್ಲಿ ನಮ್ಮ ಸಂಘವನ್ನು ಎ ವರ್ಗಕ್ಕೆ ಸೇರಿಸಲಾಗಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ ಸಂಘದಲ್ಲಿ ಪಿಗ್ಮಿ ಸಾಪ್ಟ್ವೇರ್ ಅಳವಡಿಸಲಾಗಿದೆ ಮತ್ತು ಠೇವಣಿಗಳ ಮೇಲೆ ಆಕರ್ಷಕ ಬಡ್ಡಿ ನೀಡಲಾಗುತ್ತಿದೆ. ಇದರ ಪ್ರಯೋಜನವನ್ನು ಸದಸ್ಯರುಗಳು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಸಂಘದ ಉಪಾಧ್ಯಕ್ಷ ಜೇಮ್ಸ್ ಡಿಸೋಜಾ ಮಾತನಾಡಿ, ನಮ್ಮ ಸಹಕಾರ ಸಂಘದ ಅಭಿವೃದ್ಧಿಯಲ್ಲಿ ಸಹಕಾರ ನೀಡಿದ ೧೨ ಜನ ಸದಸ್ಯರ ಸನ್ಮಾನಿತರ ಪಟ್ಟಿಯನ್ನು ಓದಿದರು. ನಿರ್ದೇಶಕರಾದ ವಿ.ಟಿ.ಥಾಮಸ್, ಸಲ್ವಾದೋರ್ ಪಾಯಿಸ್, ಕ್ರಿಸ್ಟೋಫರ್ ಜಾರ್ಜ್, ರೊನಾಲ್ಡ್ ಸೆರಾವೋ, ಕಾರ್ಯದರ್ಶಿ ಸುನೀತಾ ಮತ್ತಿತರರಿದ್ದರು.